ಭಾರತೀಯ ವಿಜ್ಞಾನಿಗಳಿಂದ ಅಯಾನುಗೋಳದ ಎಲೆಕ್ಟ್ರಾನ್ ಸಾಂದ್ರತೆ ಅಂದಾಜಿಸಲು ನೂತನ ಮಾದರಿ ಅನ್ವೇಷನೆ
Published by Siddaram Halli
20 ಏಪ್ರಿಲ್ 2020
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನೆಟಿಸಮ್(Indian Institute of Geomagnetism)ನ ಸಂಶೋಧಕರು ಅಯಾನುಗೋಳದ ಎಲೆಕ್ಟ್ರಾನಿಕ್ ಸಾಂದ್ರತೆಯನ್ನು ಅಂದಾಜಿಸುವ ನೂತನ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮಾದರಿಯ ಅನ್ವೇಷಣೆಯು ಭೂಮಿಯ ಮೇಲಿನ ಸಂವಹನ ಮತ್ತು ಸಂಚರಣೆಗಾಗಿ ಅನುಕೂಲವಾಗಲಿದೆ. 20 ವರ್ಷಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿದ ಡೇಟಾವನ್ನು ಬಳಸಿಕೊಂಡು ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ.