ಎರಡನೇ ಹಂತದ ಲಾಕ್ಡೌನ್ ಮೇ 3 ರ ವರೆಗೆ ಘೋಷಿಸಿ ಪ್ರಧಾನಿ ಭಾಷಣ
Published by Basavaraj Halli
15 ಏಪ್ರಿಲ್ 2020
ನವದೆಹಲಿ : ದೇಶದಲ್ಲಿ ವ್ಯಾಪಿಸುತ್ತಿರುವ ಕರೋನ ವೈರಸ್ ನಿಯಂತ್ರಿಸಲು ಸಲುವಾಗಿ ಭಾರತದಲ್ಲಿ ಎರಡನೇ ಹಂತದ ಲಾಕ್-ಡೌನ್ ಮೇ 03 ರ ವರೆಗೆ ವಿಧಿಸಿ ಪ್ರಧಾನಿ ಮೋದಿಯವರು ಮಂಗಳವಾರ (ಏಪ್ರಿಲ್ 14) ತಮ್ಮ ಭಾಷಣದಲ್ಲಿ ಘೋಷಿಸಿದರು.
* ಮಾರ್ಚ್ 23 ರಿಂದ ಏಪ್ರಿಲ್ 14ರ ತನಕ ಮೊದಲನೇ ಹಂತದ 21 ದಿನಗಳ ಲಾಕ್ಡೌನ್ ಈಗಾಗಲೇ ಪೂರ್ಣಗೊಂಡಿದೆ.
ಪ್ರಧಾನಿಯವರು ತಮ್ಮ ಭಾಷಾದ ವೇಳೆ ಜನರಿಗೆ ಸಪ್ತ ಸೂತ್ರಗಳನ್ನು ನೀಡಿದ್ದು ಅವುಗಳ ವಿವಿರ ಈ ಕೆಳಗಿನಂತಿದೆ:
* ಮನೆಯಲ್ಲಿರುವ ವಯೋವೃದ್ಧರ ಬಗ್ಗೆ ಕಾಳಜಿ ವಹಿಸಿ
* ಲಾಕ್ಡೌನ್ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಮನೆಯಲ್ಲೇ ತಯಾರಿಸಿದ ಮಾಸ್ಕ್ ಧರಿಸಿ
* ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುಷ್ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿ
* ಆರೋಗ್ಯ ಸೇತು ಆಪ್ ಡೌನ್ಡೌಡ್ ಮಾಡಿ ಬಳಸಿ.
* ಬಡವರು, ನಿರ್ಗತಿಕರ ಊಟ, ವಸತಿ ಬಗ್ಗೆ ನಿಗಾವಹಿಸಿ, ಅವರಿಗೆ ಸಹಾಯ ಮಾಡಿ.
* ಯಾರನ್ನು ಕೆಲಸದಿಂದ ತೆಗೆಯಬೇಡಿ, ಕೃಷಿಕರ ಬೆಂಬಲಕ್ಕೆ ನಿಲ್ಲಿ, ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಮುಂತಾದ ಕೊರೊನಾ ವಾರಿಯರ್ಸ್ ಗೌರವಿಸಿ ಮತ್ತು ಸಹಕರಿಸಿ