ಲಾಕ್ ಡೌನ್ ಸಮಯದಲ್ಲಿ ದೇಶಾದ್ಯಂತ 6,300 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಣೆ
Published by Basavaraj Halli
14 ಏಪ್ರಿಲ್ 2020
ಕರೋನ ವೈರಸ್ ನಿಂದಾಗಿ ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ಸಮಯದಲ್ಲಿ ಜನರಿಗೆ ತುರ್ತು ಔಷಧಿಗಳ ಪೂರೈಕೆಗಾಗಿ ಪ್ರಧಾನ್ ಮಂತ್ರಿ ಜನೌಷದಿ ಕೇಂದ್ರಗಳಲ್ಲಿ ಸಾಕಷ್ಟು ಔಷಧಿಗಳ ಲಭ್ಯತೆ ಕುರಿತು ಭಾರತ ಸರ್ಕಾರ ಖಚಿತಪಡಿಸಿದೆ. ಸಾರ್ವಜನಿಕರಿಗೆ ಕೈಗೆಟುಕುವ ದರಗಳಲ್ಲಿ ಔಷಧಿಗಳನ್ನು ಪೂರೈಸುವ ಸುಮಾರು 6,300 ಕ್ಕೂ ಹೆಚ್ಚು ಪ್ರಧಾನ್ ಮಂತ್ರಿ ಜನಔಷದಿ ಕೇಂದ್ರಗಳು ಪ್ರಸ್ತುತ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದೂ ಕೇಂದ್ರ ಸರ್ಕಾರ ತಿಳಿಸಿದೆ.
* “ಜನ ಔಷದಿ ಸುಗಮ್” ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದ್ದು, ಇದು ದೇಶದ ಹತ್ತಿರದ ಜನೌಷಧಿ ಕೇಂದ್ರವನ್ನು ಗುರುತಿಸಲು ಸಹಕಾರಿಯಾಗಿದೆ.