ಬಿಬಿಎಂಪಿಯಿಂದ 'ಸಹಾಯ ಸೇತುವೆ' ಅಪ್ಲಿಕೇಶನ್ ಬಿಡುಗಡೆ
Published by Basavaraj Halli
15 ಏಪ್ರಿಲ್ 2020
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ BBMP ಯಿಂದ 'ಸಹಾಯ ಸೇತುವೆ' ಎಂಬ ಹೊಸ ಅಪ್ಲಿಕೇಶನ್ ಆರಂಭಿಸಲಾಯಿತು.
ಈ ಅಪ್ಲಿಕೇಶನ್ ಯಿಂದ ಇಂದಿರಾ ಕ್ಯಾಂಟೀನ್, ಫೀವರ್ ಕ್ಲಿನಿಕ್ ಸೇರಿದಂತೆ ಇನ್ನಿತರ ಹಲವು ಅಗತ್ಯ ಮಾಹಿತಿಗಳನ್ನು ಪಡೆಯಬಹುದಾಗಿದೆ.
ದೇಶದಲ್ಲಿ ಕೊರೊನಾ ಹರಡದಂತೆ ಸುರಕ್ಷೆತೆಗಾಗಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು ಈ ಸಮಯದಲ್ಲಿ ಜನರ ಸುರಕ್ಷತೆ ಹಾಗೂ ನಿರ್ಗತಿಕರ ಬಗ್ಗೆ ಕಾಳಜಿಗಾಗಿ ಈ ನೂತನ 'ಸಹಾಯ ಸೇತುವೆ' ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.