ಶನಿವಾರ, 22 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನದ ಪದಕ
Authored by:
Basavaraj Halli
ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನದ ಪದಕ ಸೇರಿಕೊಂಡವು, ಪಿಂಕಿ ಮತ್ತು ಸರಿಟಾ ಚಿನ್ನದ ಪದಕಗಳನ್ನು ಗಳಿಸಿದರು.
* 55 ಕೆಜಿ ವಿಭಾಗದ ಫೈನಲ್ ಪಂಧ್ಯದಲ್ಲಿ ಮಂಗೋಲಿಯಾದ ದುಲ್ಗುನ್ ಬೊಲೊರಾಮಾ ಅವರನ್ನು 2-1 ಅಂಕಗಳ ಅಂತರದಿಂದ ಸೋಲಿಸಿ ಪಿಂಕಿ ಚಿನ್ನದ ಪದಕಕ್ಕೆ ಪಡೆದರು.
* ಇನ್ನು 59 ಕೆಜಿ ವಿಭಾಗದಲ್ಲಿ, ಸರಿತಾ ಮಂಗೋಲಿಯಾದ ಬ್ಯಾಟೆಟ್‌ಸೆಟ್ಗ್ ಅಲ್ಟನ್‌ಸೆಟ್ಸೆಗ್ ವಿರುದ್ಧ 3-2 ಅಂತರದಿಂದ ಗೆದ್ದು ಬಂಗಾರದ ಪದಕ ಪಡೆದರು.
* ಈಗಾಗಲೇ ದಿವ್ಯಾ ಕಕ್ರನ್ ಏಷ್ಯನ್ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಮಹಿಳೆಯಾಗಿದ್ದಾರೆ.
* ನವಜೋತ್ ಕೌರ್ 2018 ರಲ್ಲಿ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.