ಶನಿವಾರ, 22 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಡೊನಾಲ್ಡ್ ಟ್ರಂಪ್ ಭಾರತ ಭೇಟಿ: 5 ಒಪ್ಪಂದಗಳಿಗೆ ಸಹಿ ನಿರೀಕ್ಷೆ
Authored by:
Basavaraj Halli
ನವದೆಹಲಿ: ಇದೆ ಫೆಬ್ರುವರಿ 24 ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿನೀಡಲಿದ್ದಾರೆ.
ಈ ವೇಳೆ ಭಾರತವು ಅಮೆರಿಕಾದೊಂದಿಗೆ ಐದು ಪ್ರಮುಖ ಒಪ್ಪಂದಗಳನ್ನೂ ಮಾಡಿಕೊಳ್ಳುವ ಬಗ್ಗೆ ನಿರೀಕ್ಷಿಸಲಾಗಿದೆ
ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಒಪ್ಪಂದಗಳಾಗಬಹುದಾದ ಕ್ಷೇತ್ರಗಳು :
* ಬೌದ್ಧಿಕ ಆಸ್ತಿ ಹಕ್ಕು
* ವ್ಯಾಪಾರ ಸೌಲಭ್ಯ
* ರಾಷ್ಟ್ರೀಯ ಭದ್ರತೆ
* ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ
* ರಕ್ಷಣೆ-ವ್ಯಾಪಾರ ಕ್ಷೇತ್ರದ ಬಾಂಧವ್ಯ ವೃದ್ಧಿ
* ಎಚ್1ಬಿ ವೀಸಾ ಕುರಿತಾದ ಭಾರತದ ಕಳವಳ
ಸೇರಿ ಮುಂತಾದ ವಿಷಯಗಳು ಮೋದಿ ಮತ್ತು ಟ್ರಂಪ್ ನಡುವೆ ನಡೆಯುವ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಮುಖವಾಗಿ ಚರ್ಚೆಯಾಗಬಹುದಾದ ವಿಷಯಗಳಾಗಿವೆ.