ಗುರುವಾರ, 13 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಸಿದ್ದಿ, ತಳವಾರ, ಪರಿವಾರ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ: ಲೋಕಸಭೆ ಅಂಗೀಕಾರ
Authored by:
Basavaraj Halli
ಕರ್ನಾಟಕ ರಾಜ್ಯದ ವಿವಿಧ ಜಿಲ್ಲಾ ವ್ಯಾಪ್ತಿಗಳಲ್ಲಿ ವಾಸಿಸುತ್ತಿರುವ 'ಪರಿವಾರ', 'ತಳವಾರ' ಮತ್ತು 'ಸಿದ್ದಿ' ಸಮುದಾಯದ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ.
ಈ ಮಸೂದೆ ಈಗಾಗಲೇ ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿತ್ತು, 'ತಳವಾರ', 'ಪರಿವಾರ' ಮತ್ತು ಸಿದ್ದಿ ಸಮುದಾಯದ ಜನರು ಪರಿಶಿಷ್ಟ ಪಂಗಡದ ಸೌಲಭ್ಯಗಳನ್ನು ಪಡೆಯಲು ಈ ಮಸೂದೆ ನೆರವಾಗಲಿದೆ.
* ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಖಾತೆ ಸಚಿವ ಅರ್ಜುನ್ ಮುಂಡಾ ಅವರು ಮಸೂದೆಯನ್ನು ಮಂಡಿಸಿದ್ದು ಇನ್ನು ರಾಷ್ಟ್ರಪತಿಯವರ ಅನುಮೋದನೆ ಬಾಕಿ ಇದೆ.