➤ ಭಾರತ ಮತ್ತು ಅಮೆರಿಕದ ರಕ್ಷಣಾ ಸಂಬಂಧದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಸ್ಥಾಪಿತವಾಗಿದೆ. ಉಭಯ ದೇಶಗಳ ಸಶಸ್ತ್ರ ಪಡೆಗಳ ನಡುವಿನ ಐದನೇ ಆವೃತ್ತಿಯ ಜಂಟಿ ಸೈನಿಕ ಸಮರಾಭ್ಯಾಸ 'ಟೈಗರ್ ಟ್ರಯಂಫ್ 2026' (Tiger Triumph 2026) ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ.
➤ ನವೆಂಬರ್ 2, 2026 ರಿಂದ ಆರಂಭವಾಗಿರುವ ಈ ಮಹತ್ವದ ಸಮರಾಭ್ಯಾಸವು ವಿಶಾಖಪಟ್ಟಣದ 'ಮ್ಯಾರಿಟೈಮ್ ವಾರ್‌ಫೇರ್ ಸೆಂಟರ್' (MWC)ನಲ್ಲಿ ಆಯೋಜನೆಗೊಂಡಿದ್ದು, ಉಭಯ ದೇಶಗಳ ರಕ್ಷಣಾ ಪಡೆಗಳ ನಡುವಿನ ಸಮ್ಮಿಲನ ಮತ್ತು ಕಾರ್ಯತಂತ್ರವನ್ನು ಬಲಪಡಿಸುವ ಗುರಿ ಹೊಂದಿದೆ.
➤ ಈ ಬಾರಿಯ 'ಟೈಗರ್ ಟ್ರಯಂಫ್' ವಿಶೇ‌ಷತೆ:

  1. ತ್ರಿ-ಸೇವೆಗಳ ಪೂರ್ಣ ಭಾಗವಹಿಸುವಿಕೆ (Tri-Service Exercise):ಭಾರತೀಯ ಸೇನೆ (Army), ನೌಕಾಪಡೆ (Navy) ಮತ್ತು ವಾಯುಪಡೆ (Air Force) ಸೇರಿದಂತೆ ಮೂರೂ ಪಡೆಗಳ ಸಿಬ್ಬಂದಿ ಅಮೆರಿಕದ ಸಶಸ್ತ್ರ ಪಡೆಗಳ ಜೊತೆ ಜಂಟಿಯಾಗಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ.
  2. ಸೈಬರ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ:ಈ ಆವೃತ್ತಿಯಲ್ಲಿ ಸಾಂಪ್ರದಾಯಿಕ ತರಬೇತಿಯ ಜೊತೆಗೆ ಸೈಬರ್ (Cyber Security), ಬಾಹ್ಯಾಕಾಶ (Space Synchronization) ಹಾಗೂ ಕಮಾಂಡ್ ಮತ್ತು ಕಂಟ್ರೋಲ್ ತಂತ್ರಜ್ಞಾನಗಳ ಸಮನ್ವಯತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
  3. ಎನ್‌ಡಿಆರ್‌ಎಫ್ (NDRF) ಮೊದಲ ಬಾರಿಗೆ ಸೇರ್ಪಡೆ:ವಿಪತ್ತು ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ಭಾರತದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಇದೇ ಮೊದಲ ಬಾರಿಗೆ ಈ ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸುತ್ತಿದೆ.

➤ ಟೈಗರ್ ಟ್ರಯಂಫ್ ಸಮರಾಭ್ಯಾಸದ ಹಿನ್ನೆಲೆ (Background):

  • ಆರಂಭವಾದ ವರ್ಷ: ಭಾರತ ಮತ್ತು ಅಮೆರಿಕ ನಡುವಿನ ಮೊದಲ 'ಟೈಗರ್ ಟ್ರಯಂಫ್' ಸಮರಾಭ್ಯಾಸವು 2019 ರಲ್ಲಿ ನಡೆಯಿತು.
  • ಹಿನ್ನೆಲೆ: ರಷ್ಯಾ ಹೊರತುಪಡಿಸಿ ಭಾರತವು ಮತ್ತೊಂದು ದೇಶದೊಂದಿಗೆ ನಡೆಸುತ್ತಿರುವ ಏಕೈಕ 'ತ್ರಿ-ಸೇವಾ' (Tri-Service) ಜಂಟಿ ಸಮರಾಭ್ಯಾಸ ಇದಾಗಿದೆ.
  • ಉದ್ದೇಶ: ಇಂಡೋ-ಪೆಸಿಫಿಕ್ (Indo-Pacific) ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಹಾಗೂ ನೈಸರ್ಗಿಕ ವಿಕೋಪಗಳು ಎದುರಾದಾಗ ತಕ್ಷಣ ಸ್ಪಂದಿಸುವ ತಾಂತ್ರಿಕ ಮತ್ತು ಸೈನಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಪ್ರಮುಖ ಧೈಯವಾಗಿದೆ.