ಮಂಗಳವಾರ, 14 ಜನವರಿ 2020
5:30 ಪೂರ್ವಾಹ್ನ
Daily PDF
ಗಣರಾಜ್ಯೋತ್ಸವ ದಿನ ಹಾರಾಡಲಿವೆ ಚಿನೂಕ್, ಅಪಾಚೆ ಹೆಲಿಕಾಪ್ಟರ್ ಗಳು
Authored by:
Basavaraj Halli
ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ಹೆಲಿಕಾಪ್ಟರ್ ಅಪಾಚೆ ಮತ್ತು ಸಾಗಾಟ ವಿಮಾನ ಚಿನೂಕ್ ಜನವರಿ 26ರಂದು ಗಣರಾಜ್ಯೋತ್ಸವದ ದಿನ ಮೊದಲ ಬಾರಿಗೆ ಆಕಾಶದಲ್ಲಿ ಹಾರಾಟ ನಡೆಸಿ ತಮ್ಮ ಚಮತ್ಕಾರ ತೋರಿಸಲಿವೆ.
ಚಿನೂಕ್ ನಡಿ ಹೊಸದಾಗಿ ಮೂರು ಸಾಗಾಟ ಹೆಲಿಕಾಪ್ಟರ್ ಗಳು ಸೇರ್ಪಡೆಯಾಗಿದ್ದು ಅವು ವಿಕ್ ಆಕಾರದಲ್ಲಿ ಹಾರಾಟ ನಡೆಸಲಿವೆಎಂದು ಭಾರತೀಯ ವಾಯುಪಡೆ ತಿಳಿಸಿದೆ. ಇನ್ನು ಈಬಾರಿ ಗಣರಾಜ್ಯೋತ್ಸವದಲ್ಲಿ ಐದು ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳು ಬಾಣದ ಆಕಾರದಲ್ಲಿ ಹಾರಾಟ ನಡೆಸಿ ತಮ್ಮ ಚಮತ್ಕಾರ ತೋರಿಸಲಿವೆ.