ಮಂಗಳವಾರ, 14 ಜನವರಿ 2020
5:30 ಪೂರ್ವಾಹ್ನ
Daily PDF
ಮಾಜಿ ಸಚಿವ ಎಂ.ಬಿ.ಪಾಟೀಲ್ ಗೆ ರಾಜಸ್ಥಾನದ ಪರ್ಯಾವರಣ ಪ್ರಶಸ್ತಿ
Authored by:
Basavaraj Halli
ರಾಜ್ಯದಲ್ಲಿ ಜಲಸಂಪನ್ಮೂಲ ಸಚಿವರಾಗಿ ಜಲ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಗಾಗಿ ಕೋಟಿ ವೃಕ್ಷ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿರುವ ಬಬಲೇಶ್ವರ ಶಾಸಕರಾದ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ರಾಜಸ್ಥಾನ ರಾಜ್ಯದ ಪ್ರಶಸ್ತಿ ದೊರಕಿದೆ.
ರಾಜಸ್ಥಾನ ರಾಜ್ಯದ ತರುಣ್ ಭಾರತ ಸಂಘದಿಂದ ಪ್ರತಿ ವರ್ಷ ನೀಡುವ ಪರ್ಯಾವರಣ ರಕ್ಷಕ ಸಮ್ಮಾನ-2019 ಪ್ರಶಸ್ತಿ ಈ ಬಾರಿ ಜಲಸಂಪನ್ಮೂಲ ಮಾಜಿ ಸಚಿವ ಎಂ. ಬಿ.ಪಾಟೀಲ್ ಅವರಿಗೆ ನೀಡಲಾಗಿದೆ.