* ನವೆಂಬರ್ 20-28 ರವರೆಗೆ ಪಣಜಿಯಲ್ಲಿ ನಡೆಯಲಿರುವ 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಪೋಸ್ಟರ್ ಪ್ರಸ್ತುತ ನಡೆಯುತ್ತಿರುವ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅನಾವರಣಗೊಳಿಸಲಾಗಿದೆ.
* ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಸಂಜಯ್ ಜಾಜು, ಫ್ರಾನ್ಸ್‌ನರುವ ಭಾರತದ ರಾಯಭಾರಿ ಜಾವೇದ್ ಅಶ್ರಫ್ ಉಪಸ್ಥಿತರಿದ್ದರು.
* ನೆಟ್‌ವರ್ಕಿಂಗ್, ದೇವ್‌ವ್ ಮತ್ತು ಭಾರತೀಯ ಸಿನಿಮಾವನ್ನು ಉತ್ತೇಜಿಸುವಲ್ಲಿ ಇಂಡಿಯಾ ಪೆವಿಲಿಯನ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಜಯ್ ಜಾಜು ಹೇಳಿದ್ದಾರೆ.
* ಭಾರತವು ಪ್ರತಿ ವರ್ಷ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತದೆ. ಈ ವರ್ಷ, ಕೇನ್ಸ್ ನಲ್ಲಿ ನಡೆದ ಈ ಉತ್ಸವದಲ್ಲಿ ‘ಇಂಡಿಯಾ ಪೆವಿಲಿಯನ್’ ಅನ್ನು ಉದ್ಘಾಟಿಸಲಾಯಿತು.ಜಮ್ಮು ಮತ್ತು ಕಾಶ್ಮೀರ,ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳು ಕೇನ್ಸ್ ಚಲನಚಿತ್ರೋತ್ಸವದಲ್ಲಿ ದೇಶವನ್ನು ಪ್ರತಿನಿಧಿಸುತ್ತವೆ. ಚಿತ್ರೀಕರಣವನ್ನು ಉತ್ತೇಜಿಸುವ ಯೋಜನೆಗಳನ್ನು ಇಂಡಿಯಾ ಪೆವಿಲಿಯನ್‍ನಲ್ಲಿ ಘೋಷಿಸಲಾಗುತ್ತದೆ.
ಸೋಮವಾರ, 20 ಮೇ 2024
10:31 ಪೂರ್ವಾಹ್ನ
Daily PDF
55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ
Authored by:
Yallamma G