➤ ಭಾರತೀಯ ಸೇನೆ ಮತ್ತು ನೇಪಾಳ ಸೇನೆಯ ನಡುವಿನ 20ನೇ ಆವೃತ್ತಿಯ ಜಂಟಿ ಸೇನಾ ಸಮರಾಭ್ಯಾಸ 'ಸೂರ್ಯ ಕಿರಣ' (Exercise Surya Kiran 2026) ನೇಪಾಳದ ರೂಪಂದೇಹಿ ಜಿಲ್ಲೆಯ ಸಲ್ಜಂಡಿಯಲ್ಲಿರುವ ನೇಪಾಳ ಸೇನಾ ಯುದ್ಧ ಶಾಲೆಯಲ್ಲಿ ಆರಂಭವಾಗಿದೆ. ಕಳೆದ ವಾರ ಭಾರತೀಯ ಸೇನೆಯು ಈ ಆವೃತ್ತಿಯ ಧ್ಯೇಯವಾಕ್ಯವನ್ನು ಪ್ರಕಟಿಸಿದ್ದು, ನವೆಂಬರ್ 25, 2026ರಂದು ಆರಂಭವಾದ ಈ ಅಭ್ಯಾಸವು ಡಿಸೆಂಬರ್ 8, 2026ರವರೆಗೆ ನಡೆಯಲಿದೆ.
➤ ಸಮರಾಭ್ಯಾಸದ ಪ್ರಮುಖ ವಿವರಗಳು:
- ಸಮರಾಭ್ಯಾಸದ ಹೆಸರು: ಸೂರ್ಯ ಕಿರಣ (Surya Kiran) — 20ನೇ ಆವೃತ್ತಿ
- ಭಾಗವಹಿಸುವ ಸೇನೆಗಳು: ಭಾರತೀಯ ಸೇನೆ ಮತ್ತು ನೇಪಾಳ ಸೇನೆ
- ಆರಂಭ ಮತ್ತು ಅಂತ್ಯ ದಿನಾಂಕ: ನವೆಂಬರ್ 25, 2026 ರಿಂದ ಡಿಸೆಂಬರ್ 8, 2026
- ಸ್ಥಳ: ಸಲ್ಜಂಡಿ, ರೂಪಂದೇಹಿ ಜಿಲ್ಲೆ, ನೇಪಾಳ (ನೇಪಾಳ ಸೇನಾ ಯುದ್ಧ ಶಾಲೆ)
- 2026ರ ಧ್ಯೇಯವಾಕ್ಯ: "ಎರಡು ರಾಷ್ಟ್ರಗಳು. ಒಂದು ಗುರಿ. ಶಾಶ್ವತ ಬಾಂಧವ್ಯ" ("Two Nations. One Mission. An Enduring Bond")
- ಆವರ್ತನ: ವಾರ್ಷಿಕವಾಗಿ (ಭಾರತ ಮತ್ತು ನೇಪಾಳ ಪರ್ಯಾಯವಾಗಿ ಆತಿಥ್ಯ ವಹಿಸುತ್ತವೆ)
- ಮೊದಲ ಆವೃತ್ತಿ: 2011
➤ ಪ್ರಮುಖ ತರಬೇತಿ ಕ್ಷೇತ್ರಗಳು:
- ವಿಪತ್ತು ನಿರ್ವಹಣೆ ಮತ್ತು ಮಾನವೀಯ ನೆರವು (HADR) ಕಾರ್ಯಾಚರಣೆಗಳು
- ಅರಣ್ಯ ಪ್ರದೇಶದ ಯುದ್ಧ ತಂತ್ರಗಳು
- ಬೆಟಾಲಿಯನ್ ಮಟ್ಟದ ಸೈನಿಕರಿಂದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಜ್ಞಾನದ ವಿನಿಮಯ
➤ ಹಿಂದಿನ ಆವೃತ್ತಿ (19ನೇ ಆವೃತ್ತಿ — 2025)
- ಉತ್ತರಾಖಂಡದ ಪಿಥೋರಗಢದಲ್ಲಿ ನವೆಂಬರ್ 25 ರಿಂದ ಡಿಸೆಂಬರ್ 8, 2025ರವರೆಗೆ ನಡೆದಿತ್ತು
- ಉಭಯ ರಾಷ್ಟ್ರಗಳಿಂದ ತಲಾ 334 ಸೈನಿಕರು (ಭಾರತದ ಅಸ್ಸಾಂ ರೆಜಿಮೆಂಟ್ ಮತ್ತು ನೇಪಾಳದ ದೇವಿ ದತ್ತ ರೆಜಿಮೆಂಟ್) ಭಾಗವಹಿಸಿದ್ದರು
- ವಿಶ್ವಸಂಸ್ಥೆಯ ಚಾರ್ಟರ್ನ ಏಳನೇ ಅಧ್ಯಾಯದಡಿ ಭಯೋತ್ಪಾದನೆ ನಿಗ್ರಹ, ಡ್ರೋನ್ ಆಧಾರಿತ ಕಣ್ಗಾವಲು ಮತ್ತು ಮಾನವರಹಿತ ವ್ಯವಸ್ಥೆಗಳ ಬಳಕೆಗೆ ಒತ್ತು ನೀಡಲಾಗಿತ್ತು
➤ ಐತಿಹಾಸಿಕ ಮತ್ತು ರಕ್ಷಣಾ ಬಾಂಧವ್ಯ
- 1950ರಿಂದ ಭಾರತ ಮತ್ತು ನೇಪಾಳ ಪರಸ್ಪರ ಸೇನಾ ಮುಖ್ಯಸ್ಥರಿಗೆ ಗೌರವ ಜನರಲ್ ಪದವಿ ನೀಡುವ ಸಂಪ್ರದಾಯವನ್ನು ಮುಂದುವರಿಸಿವೆ
- ಹಿಮಾಲಯ ವಲಯದ ಭದ್ರತೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ತ್ವರಿತ ಸ್ಪಂದನೆಗೆ ಈ ಜಂಟಿ ತರಬೇತಿ ಪೂರಕವಾಗಿದೆ
ಭಾರತ–ನೇಪಾಳ 20ನೇ ಜಂಟಿ ಸೇನಾ ಸಮರಾಭ್ಯಾಸ 'ಸೂರ್ಯ ಕಿರಣ' (Surya Kiran 2026)
Published by
Yallamma G
26 ನವೆಂಬರ್ 2026