* ಮುತ್ತಿನ ನಗರಿ ಹೈದರಾಬಾದ್ ಜೂನ್ 2ರ ನಂತರ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಜಂಟಿ ರಾಜಧಾನಿಯಾಗಿ ಮುಂದುವರಿಯುವುದಿಲ್ಲ. ನಂತರ ಅದು ತೆಲಂಗಾಣದ ರಾಜಧಾನಿಯಾಗಿ ಮಾತ್ರ ಇರಲಿದೆ. 'ಹೈದರಾಬಾದ್ ನಗರವು, 10 ವರ್ಷ ಮೀರದಂತೆ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ರಾಜಧಾನಿಯಾಗಿರಲಿದೆ.
* ಈ ವ್ಯವಸ್ಥೆ ರಾಜ್ಯ ವಿಭಜನೆಯಾದ 2014ರ ಜೂನ್ 2ರಿಂದ ಜಾರಿಗೆ ಬರಲಿದೆ' ಎಂದು ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆ, 2014 ಸೆಕ್ಷನ್ 5ರಲ್ಲಿ ಹೇಳಲಾಗಿದೆ.
* ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆಯಡಿ ಉಭಯ ರಾಜ್ಯಗಳ ನಡುವೆ ಬಗೆಹರಿಯದೇ ಉಳಿದಿರುವ ವಿಷಯಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆಯೂ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಸೂಚನೆ ನೀಡಿದ್ದರು.
ಶನಿವಾರ, 18 ಮೇ 2024
8:35 ಅಪರಾಹ್ನ
Daily PDF
ಹೈದರಾಬಾದ್ ಜೂನ್ 2ರಿಂದ ತೆಲಂಗಾಣಕ್ಕೆ ಮಾತ್ರ ರಾಜಧಾನಿ
Authored by:
Bhagya R K