ಐಟಿಐ ಪಾಸಾದ ಕನ್ನಡಿಗರಿಗೆ ಉಡುಪಿ ಶಿಪ್‌ಯಾರ್ಡ್‌ನಲ್ಲಿ ಕಾಯಂ ಉದ್ಯೋಗ; ₹30 ಸಾವಿರ ಸಂಬಳ, ಇಂದೇ ಅರ್ಜಿ ಸಲ್ಲಿಸಿ!
ಭಾರತ ಸರ್ಕಾರದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಬರುವ 'ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್' (UCSL) ತನ್ನ ಮಲ್ಪೆ ಘಟಕದಲ್ಲಿ ಖಾಲಿ ಇರುವ ವರ್ಕ್‌ಮೆನ್ (Workmen) ಕೆಟಗರಿಯ ಕಾಯಂ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಪೈಪ್ ಫಿಟ್ಟರ್ (Pipe Fitter), ವೆಲ್ಡರ್ (Welder), ಎಲೆಕ್ಟ್ರಿಷಿಯನ್ (Electrician) ಮತ್ತು ಮೆಷಿನರಿ ಫಿಟ್ಟರ್ (Machinery Fitter) ಸೇರಿದಂತ್ತೆ ಒಟ್ಟು 35 ಹುದ್ದೆಗಳನ್ನು ನೇಮಕ ಮಾಡಿಕೊಳಲಾಗುತ್ತಿದೆ.
ಉಡುಪಿ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 17-ಜೂಲೈ-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಕಾರ್ಖಾನೆಯಲ್ಲಿನ ಅಪಾಯಕಾರಿ ಕಾರ್ಯಾಚರಣೆಗಳ ಸ್ವರೂಪದಿಂದಾಗಿ ಈ ಹುದ್ದೆಗಳಿಗೆ ಕೇವಲ ಪುರುಷ/ಮಹಿಳಾ ಸಾಮಾನ್ಯ ಅಭ್ಯರ್ಥಿಗಳಿಗೆ ಅವಕಾಶವಿದ್ದು, ವಿಕಲಚೇತನರಿಗೆ (PwBD) ಅವಕಾಶವಿರುವುದಿಲ್ಲ. ಈ ನೇಮಕಾತಿಯ ಸಂಪೂರ್ಣ ಅರ್ಹತೆ, ವಯೋಮಿತಿ, ಸಂಬಳ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಕೆಳಗಿನಂತಿದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..
ನೇಮಕಾತಿಯ ಸಂಕ್ಷಿಪ್ತ ವಿವರ (Quick Overview)
- ಹುದ್ದೆಗಳ ಪ್ರಕಾರ : ಕೇಂದ್ರ ಸರ್ಕಾರಿ ಕಾಯಂ ಹುದ್ದೆಗಳು (Permanent Rolls)
- ಯಾರಿಗೆ ಅವಕಾಶ? : ಕೇವಲ ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಮೀಸಲು
- ಒಟ್ಟು ಹುದ್ದೆಗಳು : 35 ಹುದ್ದೆಗಳು
- ಅರ್ಜಿ ಸಲ್ಲಿಕೆ ಆರಂಭ : 18 ಜೂನ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17 ಜುಲೈ 2026
ಹುದ್ದೆಗಳ ವಿವರ ಮತ್ತು ಮೀಸಲಾತಿ (Vacancy Details)ಒಟ್ಟು 35 ಹುದ್ದೆಗಳ ವರ್ಗಾವಾರು (Category-wise) ಹಂಚಿಕೆ ಈ ಕೆಳಗಿನಂತಿದೆ:
- ಪೈಪ್ ಫಿಟ್ಟರ್ (Pipe Fitter) : 10 (UR-3, OBC-3, SC-2, ST-1, EWS-1)
- ವೆಲ್ಡರ್ (Welder) : 10 (UR-4, OBC-4, SC-1, EWS-1 (ST ಗೆ ಹುದ್ದೆ ಇಲ್ಲ)
- ಎಲೆಕ್ಟ್ರಿಷಿಯನ್ (Electrician) : 10 (UR-4, OBC-2, SC-2, ST-1, EWS-1)
- ಮೆಷಿನರಿ ಫಿಟ್ಟರ್ (Machinery Fitter) : 5 (UR-2, OBC-1, SC-1, EWS-1 )
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ಟ್ರೇಡ್‌ನಲ್ಲಿ ITI (National Trade Certificate) ಅಥವಾ ತತ್ಸಮಾನ NSFQ ಪ್ರಮಾಣಪತ್ರ ಹೊಂದಿರಬೇಕು. ಇದರೊಂದಿಗೆ ಕಡ್ಡಾಯವಾಗಿ ಕನಿಷ್ಠ 2 ವರ್ಷಗಳ ಕೆಲಸದ ಅನುಭವ ಇರಬೇಕು.
1 ಪೈಪ್ ಫಿಟ್ಟರ್: ಫಿಟ್ಟರ್/ಪ್ಲಂಬರ್/ಸ್ಯಾನಿಟರಿ ಫಿಟ್ಟರ್ ಟ್ರೇಡ್‌ನಲ್ಲಿ ಐಟಿಐ. ಹಡಗು ನಿರ್ಮಾಣ ಅಥವಾ ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಪೈಪ್ ಫ್ಯಾಬ್ರಿಕೇಶನ್, ಹೈಡ್ರೋ ಟೆಸ್ಟಿಂಗ್ ಕೆಲಸದ ಅನುಭವ ಇರಬೇಕು.
2 ವೆಲ್ಡರ್: ವೆಲ್ಡರ್ ಟ್ರೇಡ್‌ನಲ್ಲಿ ಐಟಿಐ. ಗ್ಯಾಸ್ ಕಟಿಂಗ್, ಮ್ಯಾನುಯಲ್/ಆಟೋಮ್ಯಾಟಿಕ್/MIG ವೆಲ್ಡಿಂಗ್‌ನಲ್ಲಿ ಅನುಭವ ಹೊಂದಿರಬೇಕು.
3 ಎಲೆಕ್ಟ್ರಿಷಿಯನ್: ಎಲೆಕ್ಟ್ರಿಷಿಯನ್/ವೈರ್‌ಮನ್/ಎಲೆಕ್ಟ್ರಾನಿಕ್ ಮೆಕ್ಯಾನಿಕ್‌ನಲ್ಲಿ ಐಟಿಐ. ಸಬ್‌ಸ್ಟೇಷನ್ ನಿರ್ವಹಣೆ, HT/LT ಸ್ವಿಚ್‌ಗೇರ್ ಹಾಗೂ ವೈರಿಂಗ್ ಕೆಲಸದ ಅನುಭವ ಅಗತ್ಯ.
4 ಮೆಷಿನರಿ ಫಿಟ್ಟರ್: ಫಿಟ್ಟರ್/ಡೀಸೆಲ್ ಮೆಕ್ಯಾನಿಕ್/ಮೆಷಿನಿಸ್ಟ್/ಇನ್ಸ್ಟ್ರುಮೆಂಟ್ ಮೆಕ್ಯಾನಿಕ್‌ನಲ್ಲಿ ಐಟಿಐ. ಪಂಪ್‌ಗಳು, ಜನರೇಟರ್‌ಗಳು ಮತ್ತು ಇಂಜಿನ್ ರಿಪೇರಿ ಕೆಲಸದ ಅನುಭವ ಇರಬೇಕು.
ಗಮನಿಸಿ: ಸರ್ಕಾರದ ನಿಯಮಾವಳಿಗಳ ಪ್ರಕಾರ ಪೂರ್ಣಗೊಳಿಸಿದ ಅಪೆಂಟಿಸ್‌ಶಿಪ್ (Apprenticeship Training) ತರಬೇತಿಯನ್ನು ಸಹ ಅನುಭವ ಎಂದು ಪರಿಗಣಿಸಲಾಗುತ್ತದೆ.
ಇದನ್ನು ಓದಿ : ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಬೃಹತ್ ನೇಮಕಾತಿ: 572 VAO ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ; ಶೀಘ್ರದಲ್ಲೇ ಅರ್ಜಿ ಆರಂಭ
ಸಂಬಳ ಮತ್ತು ಇತರೆ ಸೌಲಭ್ಯಗಳು
W4 ಗ್ರೇಡ್ ಅಡಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಶ್ರೇಣಿ ಸಿಗಲಿದೆ. ಸದ್ಯದ ಮಾರುಕಟ್ಟೆ ದರದಂತೆ ಮಾಸಿಕ ಭತ್ಯೆಗಳ ವಿವರ ಹೀಗಿದೆ:
- ಮೂಲ ವೇತನ (Basic Pay): ₹17,000
- ತುಟ್ಟಿಭತ್ಯೆ (DA - 54.1%): ₹9,197
- ಮನೆ ಬಾಡಿಗೆ ಭತ್ಯೆ (HRA - 10%): ₹1,700
- ಇಂಧನ ಮರುಪಾವತಿ (Fuel): ₹1,600
- ಬಟ್ಟೆ ಒಗೆಯುವ ಭತ್ಯೆ (Washing): ₹500
- ಒಟ್ಟು ಮಾಸಿಕ ವೇತನ: ₹29,997
ವಯೋಮಿತಿ ಮತ್ತು ಸಡಿಲಿಕೆ (Age Limit) :
17 ಜುಲೈ 2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು (ಅಂದರೆ 18 ಜುಲೈ 1996 ರ ನಂತರ ಜನಿಸಿರಬೇಕು).
- OBC (Non-Creamy Layer) ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ (ಗರಿಷ್ಠ 33 ವರ್ಷ)
- SC / ST ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ (ಗರಿಷ್ಠ 35 years)
- ಮಾಜಿ ಸೈನಿಕರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ.
ಅಭ್ಯರ್ಥಿಗಳನ್ನು ಎರಡು ಹಂತಗಳ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ:
ಹಂತ-1: ಲಿಖಿತ ಪರೀಕ್ಷೆ (Objective Offline Test) - 30 ಅಂಕಗಳು: 35 ನಿಮಿಷಗಳ ಅವಧಿಯ ಈ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ (5 ಅಂಕ), ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ (5 ಅಂಕ) ಮತ್ತು ನಿಮ್ಮ ಟ್ರೇಡ್‌ಗೆ ಸಂಬಂಧಿಸಿದ ಪ್ರಶ್ನೆಗಳು (20 ಅಂಕ) ಇರುತ್ತವೆ. ಯಾವುದೇ ನೆಗೆಟಿವ್ ಮಾರ್ಕ್ಸ್ ಇರುವುದಿಲ್ಲ.
ಹಂತ-2: ಪ್ರಾಯೋಗಿಕ ಪರೀಕ್ಷೆ (Practical Test) - 70 ಅಂಕಗಳು: ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು 1:6 ಅನುಪಾತದಲ್ಲಿ ಮೂಲ ದಾಖಲಾತಿ ಪರಿಶೀಲನೆಗೆ ಕರೆದು, ನಂತರ ಮಲ್ಪೆಯಲ್ಲೇ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ₹400.
SC / ST ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಹಂತ-ಹಂತದ ವಿಧಾನ (Step-by-Step Process)
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಅಭ್ಯರ್ಥಿಗಳು ಮೊದಲಿಗೆ ಕೊಚ್ಚಿನ್ ಶಿಪ್‌ಯಾರ್ಡ್ ಅಧಿಕೃತ ವೆಬ್‌ಸೈಟ್ www.cochinshipyard.in ಅಥವಾ www.udupicsl.com ಗೆ ಭೇಟಿ ನೀಡಬೇಕು.
ವೆಬ್‌ಸೈಟ್ ಮುಖಪುಟದಲ್ಲಿರುವ Career Page ಕ್ಲಿಕ್ ಮಾಡಿ, ಅಲ್ಲಿ ಕಾಣಿಸುವ UCSL, MALPE ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
ಹಂತ 2: ಆನ್‌ಲೈನ್ ನೋಂದಣಿ (Registration)
ಲಭ್ಯವಿರುವ ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಕ್ಲಿಕ್ ಮಾಡಿ, ನಿಮ್ಮ ಸಕ್ರಿಯ ಇಮೇಲ್ ಐಡಿ (E-mail ID) ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಪ್ರಾಥಮಿಕ ನೋಂದಣಿ ಪೂರ್ಣಗೊಳಿಸಬೇಕು.
ಹಂತ 3: ಅರ್ಜಿ ವಿವರಗಳನ್ನು ಭರ್ತಿ ಮಾಡುವುದು (Submission of Application)
ನೋಂದಣಿ ಯಶಸ್ವಿಯಾದ ನಂತರ, ಲಾಗಿನ್ ಐಡಿ ಬಳಸಿ ಲಾಗ್ ಇನ್ ಆಗಿ ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ (ITI ವಿವರಗಳು) ಮತ್ತು ಕಡ್ಡಾಯವಾಗಿ 2 ವರ್ಷಗಳ ಕೆಲಸದ ಅನುಭವದ (Experience) ಮಾಹಿತಿಯನ್ನು ನಿಖರವಾಗಿ ನಮೂದಿಸಬೇಕು.
ಕೇಳಲಾದ ಅಗತ್ಯ ದಾಖಲೆಗಳು, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ ಮತ್ತು ಸಹಿಯನ್ನು (Signature) ನಿಗದಿತ ಮಾದರಿಯಲ್ಲಿ ಅಪ್‌ಲೋಡ್ ಮಾಡಬೇಕು.
ಹಂತ 4: ಅರ್ಜಿ ಶುಲ್ಕ ಪಾವತಿ (Application Fee Payment)
ಸಾಮಾನ್ಯ (UR), OBC ಮತ್ತು EWS ಅಭ್ಯರ್ಥಿಗಳು ₹400/- ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ವಾಲೆಟ್ ಅಥವಾ UPI ಬಳಸಿ ಆನ್‌ಲೈನ್ ಮೂಲಕವೇ ಪಾವತಿಸಬೇಕು.
ಎಸ್‌ಸಿ, ಎಸ್‌ಟಿ (SC / ST) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (ಶುಲ್ಕ ವಿನಾಯಿತಿ ನೀಡಲಾಗಿದೆ).
ಹಂತ 5: ಅಂತಿಮ ಸಲ್ಲಿಕೆ ಮತ್ತು ಪ್ರಿಂಟೌಟ್ (Final Submission)
ಎಲ್ಲಾ ಮಾಹಿತಿಗಳನ್ನು ಒಮ್ಮೆ ಮರುಪರಿಶೀಲಿಸಿದ ನಂತರ ಅರ್ಜಿಯನ್ನು 'Final Submit' ಮಾಡಬೇಕು.
ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾದ ನಂತರ ಸಿಸ್ಟಮ್‌ನಿಂದ ಒಂದು Unique Registration Number (ವಿಶಿಷ್ಟ ನೋಂದಣಿ ಸಂಖ್ಯೆ) ಜನರೇಟ್ ಆಗುತ್ತದೆ.
ಭವಿಷ್ಯದ ಮುಂದಿನ ಪ್ರಕ್ರಿಯೆಗಳ ಉಲ್ಲೇಖಕ್ಕಾಗಿ ಸಲ್ಲಿಕೆಯಾದ ಆನ್‌ಲೈನ್ ಅರ್ಜಿಯ ಪ್ರಿಂಟೌಟ್ ಅಥವಾ ಸಾಫ್ಟ್ ಕಾಪಿಯನ್ನು (PDF) ನಿಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ನಿಯಮಗಳು (Important Instructions)
- ಪೋಸ್ಟ್ ಮೂಲಕ ಕಳುಹಿಸುವಂತಿಲ್ಲ: ಆನ್‌ಲೈನ್ ಅರ್ಜಿಯ ಪ್ರಿಂಟೌಟ್ ಆಗಲಿ ಅಥವಾ ಯಾವುದೇ ಅಂಕಪಟ್ಟಿ, ಅನುಭವದ ಪ್ರಮಾಣಪತ್ರಗಳನ್ನು ಉಡುಪಿ ಶಿಪ್‌ಯಾರ್ಡ್ ಕಚೇರಿಗೆ ಕೊರಿಯರ್ ಅಥವಾ ಪೋಸ್ಟ್ ಮೂಲಕ ಕಳುಹಿಸುವ ಅಗತ್ಯವಿರುವುದಿಲ್ಲ.
- ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಬೇಡಿ: ಅಭ್ಯರ್ಥಿಗಳು ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಸಲ್ಲಿಸಬಾರದು, ಒಮ್ಮೆ ಸಬ್ಮಿಟ್ ಮಾಡಿದ ಅರ್ಜಿ ವಿವರಗಳೇ ಅಂತಿಮವಾಗಿರುತ್ತವೆ.
- ತಪ್ಪು ಮಾಹಿತಿ ನೀಡಬೇಡಿ: ಅರ್ಜಿಯಲ್ಲಿ ಯಾವುದೇ ತಪ್ಪು ಅಥವಾ ಜಂಕ್ (Garbage) ವಿವರಗಳನ್ನು ತುಂಬಿದರೆ ಅರ್ಜಿಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ತಕ್ಷಣವೇ ತಿರಸ್ಕರಿಸಲಾಗುತ್ತದೆ.
- ಕೊನೆಯ ದಿನಾಂಕ: ಆನ್‌ಲೈನ್ ಲಿಂಕ್ ಜೂನ್ 18 ರಿಂದ ಸಕ್ರಿಯವಾಗಿದ್ದು, ಅರ್ಜಿ ಸಲ್ಲಿಸಲು 17 ಜುಲೈ 2026 ಕೊನೆಯ ದಿನವಾಗಿರುತ್ತದೆ. ಕೊನೆಯ ದಿನಗಳಲ್ಲಿ ಸರ್ವರ್ ಸಮಸ್ಯೆ ಉಂಟಾಗುವುದರಿಂದ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಸೂಕ್ತ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18-06-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-07-2026
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಎಲ್ಲಾ ಉದ್ಯೋಗ ಮಾಹಿತಿ, ಪರೀಕ್ಷಾ ದಿನಾಂಕ ಹಾಗೂ ಫಲಿತಾಂಶಗಳ ತ್ವರಿತ ಅಪ್ಡೇಟ್‌ಗಳಿಗಾಗಿ ನಿರಂತರವಾಗಿ ವೀಕ್ಷಿಸಿ "KPSCVaani" ವೆಬ್‌ಸೈಟ್.
Job Overview
- No. of posts
- 35
- Start Date
- 18 ಜೂನ್ 2026
- End Date
- 17 ಜುಲೈ 2026
- Pay Scale
- 17000 - 17000 INR
- Employment Type
- FULL_TIME
- Organization
- UCSL (Website)
- Location
- Malpe Harbour Complex,. Malpe, Udupi, Udupi, KA, 576108
Apply online Udupi Cochin Shipyard Recruitment 2026
To Buy: ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
Related Tags:
Degree

Comments