Loading..!

ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ 2801 ಹುದ್ದೆಗಳಿಗೆ ಬೃಹತ್ ನೇಮಕಾತಿ: ಐಟಿಐ (ITI) ಪಾಸಾದವರಿಗೆ ಸುವರ್ಣಾವಕಾಶ!

Tags: ITI
Published by: Yallamma G
|
ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ 2801 ಹುದ್ದೆಗಳಿಗೆ ಬೃಹತ್ ನೇಮಕಾತಿ: ಐಟಿಐ (ITI) ಪಾಸಾದವರಿಗೆ ಸುವರ್ಣಾವಕಾಶ!
ನೀವು 10ನೇ ತರಗತಿ ಹಾಗೂ ಐಟಿಐ (ITI) ಮುಗಿಸಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಹುಡುಕುತ್ತಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ ಸಿಹಿಸುದ್ದಿ! ದಕ್ಷಿಣ ಮಧ್ಯ ರೈಲ್ವೆಯು (South Central Railway - SCR) 2025-26ನೇ ಸಾಲಿನ ಆಕ್ಟ್ ಅಪ್ರೆಂಟಿಸ್ (Act Apprentices) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಬರೋಬ್ಬರಿ 2,801 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನವಿಲ್ಲದೆ ಕೇವಲ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ!

ಭಾರತೀಯ ದಕ್ಷಿಣ ಕೇಂದ್ರ ರೈಲ್ವೆ ವಲಯವು ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 2,801 ಆಕ್ಟ್ ಅಪ್ರೆಂಟಿಸ್ (Act Apprentices) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದು,  ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 11, 2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಕರ್ನಾಟಕದ ಯಾವ ಜಿಲ್ಲೆಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು?
ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಗೆ ಬರುವ ಕರ್ನಾಟಕದ ಈ ಕೆಳಗಿನ ಜಿಲ್ಲೆಗಳ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ:
ಬೆಳಗಾವಿ, ಬಳ್ಳಾರಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಭಾಲ್ಕಿ.
(ಸೂಚನೆ: ಅರ್ಜಿ ಸಲ್ಲಿಸುವಾಗ ನಿಮ್ಮ ಜಿಲ್ಲೆಯ ವಿಳಾಸ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು.)

 ಈ ನೇಮಕಾತಿಯ ಕುರಿತಾದ ಸಂಪೂರ್ಣ ಮಾಹಿತಿ, ಅರ್ಹತೆಗಳು, ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.

ದಕ್ಷಿಣ ಮಧ್ಯ ರೈಲ್ವೆಯಲ್ಲಿ ಖಾಲಿ ಹುದ್ದೆಗಳ ಅಧಿಸೂಚನೆ
  • ಸಂಸ್ಥೆಯ ಹೆಸರು : ದಕ್ಷಿಣ ಮಧ್ಯ ರೈಲ್ವೆ
  • ಹುದ್ದೆಗಳ ಸಂಖ್ಯೆ: 2801
  • ಉದ್ಯೋಗ ಸ್ಥಳ: ತೆಲಂಗಾಣ , ಆಂಧ್ರಪ್ರದೇಶ , ಮಹಾರಾಷ್ಟ್ರ , ಕರ್ನಾಟಕ , ತಮಿಳುನಾಡು , ಮಧ್ಯಪ್ರದೇಶ
  • ಹುದ್ದೆಯ ಹೆಸರು: ಅಪ್ರೆಂಟಿಸ್
  • ಸಂಬಳ: ಮಾನದಂಡಗಳ ಪ್ರಕಾರ
ಈಗಾಗಲೇ ಅಧಿಸೂಚಿದ KEA & KPSC ಗ್ರೂಪ್-ಸಿ ಪರೀಕ್ಷೆಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ

ಹುದ್ದೆಗಳ ವಿವರ : 

ಒಟ್ಟು 2,801 ಹುದ್ದೆಗಳನ್ನು ವಿವಿಧ ಟ್ರೇಡ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರಮುಖ ಟ್ರೇಡ್‌ಗಳ ವಿವರ ಇಲ್ಲಿದೆ:
  • ಎಸಿ ಮೆಕ್ಯಾನಿಕ್ : 251 
  • ಬಡಗಿ : 22
  • ಕೋಪಾ : 181
  • ಡೀಸೆಲ್ ಮೆಕ್ಯಾನಿಕ್ : 105
  • ಎಲೆಕ್ಟ್ರಿಷಿಯನ್ : 1258
  • ಎಲೆಕ್ಟ್ರಾನಿಕ್ ಮೆಕ್ಯಾನಿಕ್ : 88
  • ಫಿಟ್ಟರ್ : 539 
  • ಕೈಗಾರಿಕಾ ಎಲೆಕ್ಟ್ರಾನಿಕ್ಸ್ : 33
  • ಯಂತ್ರಶಿಲ್ಪಿ : 54 
  • ಎಂಎಂಟಿಎಂ : 24
  • ಮೋಟಾರ್ ಮೆಕ್ಯಾನಿಕ್ : 12
  • ವರ್ಣಚಿತ್ರಕಾರ : 32
  • ವೆಲ್ಡರ್ : 202 
ಶೈಕ್ಷಣಿಕ ಅರ್ಹತೆ (Educational Qualification)
  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ 10ನೇ ತರಗತಿ (SSLC) ಪಾಸ್ ಮಾಡಿರಬೇಕು.
  • ಜೊತೆಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ NCVT ಅಥವಾ SCVT ಯಿಂದ ಮಾನ್ಯತೆ ಪಡೆದ ITI ಪ್ರಮಾಣಪತ್ರವನ್ನು ಹೊಂದಿರಬೇಕು.
  • ಗಮನಿಸಿ: ಇಂಜಿನಿಯರಿಂಗ್ ಪದವೀಧರರು (BE/B.Tech) ಮತ್ತು ಡಿಪ್ಲೊಮಾ (Diploma) ಮುಗಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ (11-04-2026) ಅಭ್ಯರ್ಥಿಗೆ ಕನಿಷ್ಠ 15 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು.
  • ವಯೋಮಿತಿ ಸಡಿಲಿಕೆ ನಿಯಮಗಳು:
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST): 5 ವರ್ಷ 
  • ಹಿಂದುಳಿದ ವರ್ಗ (OBC-NCL): 3 ವರ್ಷ 
  • ವಿಕಲಚೇತನರು (PwBD): 10 ವರ್ಷ 
  • ಮಾಜಿ ಸೈನಿಕರು (Ex-Servicemen): 10 ವರ್ಷ
ಅರ್ಜಿ ಶುಲ್ಕ (Application Fee)
  • ಸಾಮಾನ್ಯ (UR) ಮತ್ತು ಹಿಂದುಳಿದ ವರ್ಗದ (OBC) ಅಭ್ಯರ್ಥಿಗಳಿಗೆ: ₹100/- SC/ST, 
  • ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳು ಹಾಗೂ ವಿಕಲಚೇತನರಿಗೆ (PwBD): ಯಾವುದೇ ಶುಲ್ಕ ಇರುವುದಿಲ್ಲ (ಉಚಿತ).
  • (ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, UPI) ಪಾವತಿಸಬೇಕು.)
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)
ರೈಲ್ವೆ ಇಲಾಖೆಯ ಈ ನೇಮಕಾತಿಯಲ್ಲಿ ಯಾವುದೇ ರೀತಿಯ ಲಿಖಿತ ಪರೀಕ್ಷೆ ಅಥವಾ ವೈಯಕ್ತಿಕ ಸಂದರ್ಶನ ಇರುವುದಿಲ್ಲ.
ಬದಲಾಗಿ, ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದ ಒಟ್ಟು ಅಂಕಗಳ ಶೇಕಡಾವಾರು ಹಾಗೂ ITI ಯಲ್ಲಿ ಪಡೆದ ಅಂಕಗಳ ಶೇಕಡಾವಾರು ಎರಡನ್ನೂ ಸೇರಿಸಿ, ಸರಾಸರಿ (Average) ತೆಗೆದು ಮೆರಿಟ್ ಪಟ್ಟಿಯನ್ನು (Merit List) ಸಿದ್ಧಪಡಿಸಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ? (How to Apply - Step by Step)
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸಂಪೂರ್ಣ ಆನ್‌ಲೈನ್ ಆಗಿರುತ್ತದೆ.
  1. ಮೊದಲ ಹಂತ (NAPS Registration): ಅಭ್ಯರ್ಥಿಗಳು ಮೊದಲು ಭಾರತ ಸರ್ಕಾರದ ಸ್ಕಿಲ್ ಡೆವಲಪ್ಮೆಂಟ್ ಪೋರ್ಟಲ್ ಆದ www.apprenticeshipindia.gov.in ಗೆ ಭೇಟಿ ನೀಡಿ ಕಡ್ಡಾಯವಾಗಿ ನೋಂದಣಿ (100% ಪ್ರೊಫೈಲ್ ಕಂಪ್ಲೀಟ್) ಮಾಡಿಕೊಂಡು Registration Number ಪಡೆದುಕೊಳ್ಳಬೇಕು.
  2. ಎರಡನೇ ಹಂತ: ನಂತರ ದಕ್ಷಿಣ ಮಧ್ಯ ರೈಲ್ವೆಯ ಅಧಿಕೃತ ವೆಬ್‌ಸೈಟ್ www.scr.indianrailways.gov.in ಗೆ ಭೇಟಿ ನೀಡಿ.
  3. ಅಲ್ಲಿ "ONLINE ACT APPRENTICE APPLICATION" ಲಿಂಕ್ ಮೇಲೆ ಕ್ಲಿಕ್ ಮಾಡಿ.
  4. ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅಂಕಗಳು ಹಾಗೂ ಆಯ್ಕೆಯ ಸ್ಥಳವನ್ನು ನಮೂದಿಸಿ.
  5. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸಹಿ (Signature) ಮತ್ತು ಅಗತ್ಯ ದಾಖಲೆಗಳನ್ನು (10th/ITI ಅಂಕಪಟ್ಟಿಗಳು, ಜಾತಿ ಪ್ರಮಾಣಪತ್ರ) PDF ರೂಪದಲ್ಲಿ ಅಪ್‌ಲೋಡ್ ಮಾಡಿ.
  6. ಕೊನೆಯದಾಗಿ, ಅರ್ಜಿ ಶುಲ್ಕ ಪಾವತಿಸಿ "Submit" ಬಟನ್ ಒತ್ತಿ ನಿಮ್ಮ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು : 
  • ಅಧಿಸೂಚನೆ ದಿನಾಂಕ: 12 ಮಾರ್ಚ್ 2026
  • ಅರ್ಜಿ ಸಲ್ಲಿಕೆ ಆರಂಭ: 12 ಮಾರ್ಚ್ 2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ಏಪ್ರಿಲ್ 2026
  • ಶುಲ್ಕ ಪಾವತಿ ಕೊನೆಯ ದಿನಾಂಕ: 11 ಏಪ್ರಿಲ್ 2026
  • ತಿದ್ದುಪಡಿ ದಿನಾಂಕ: ವೇಳಾಪಟ್ಟಿಯ ಪ್ರಕಾರ
  • ಪ್ರವೇಶ ಪತ್ರ ದಿನಾಂಕ: ವೇಳಾಪಟ್ಟಿಯ ಪ್ರಕಾರ
  • ಪರೀಕ್ಷಾ ದಿನಾಂಕ: ಶೀಘ್ರದಲ್ಲೇ ತಿಳಿಸಿ
  • ಫಲಿತಾಂಶ ದಿನಾಂಕ: ಶೀಘ್ರದಲ್ಲೇ ತಿಳಿಸಿ
KPSCvaani ಯಿಂದ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ

KPSCVaani ಸಲಹೆ:
ರೈಲ್ವೆ ಅಪ್ರೆಂಟಿಸ್ ಮಾಡುವುದರಿಂದ ಮುಂದೆ ರೈಲ್ವೆ ಇಲಾಖೆಯ Group D ಹಾಗೂ ಇತರ ನೇಮಕಾತಿಗಳಲ್ಲಿ ನಿಮಗೆ ವಿಶೇಷ ಮೀಸಲಾತಿ ಮತ್ತು ಆದ್ಯತೆ ದೊರೆಯುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ.

ನಿಮ್ಮ ಸ್ನೇಹಿತರಿಗೂ ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ! ಉದ್ಯೋಗ ಸಂಬಂಧಿತ ಮತ್ತಷ್ಟು ಕ್ಷಿಪ್ರ ಹಾಗೂ ನಿಖರ ಮಾಹಿತಿಗಾಗಿ ಪ್ರತಿದಿನ KPSCVaani ವೆಬ್‌ಸೈಟ್‌ಗೆ ಭೇಟಿ ನೀಡಿ.
Job Overview
End Date
11 ಎಪ್ರಿಲ್ 2026
Employment Type
FULL_TIME
Organization
South Central Railway (Website)
Location
KA,
To Download Official Notification
Related Tags: ITI

Comments