Loading..!

ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

Published by: Yallamma G
|
ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ 22 ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ. ಜನ್ಮ ದಿನಾಂಕ, ಕಾರ್ಯಾನುಭವ, ವಿದ್ಯಾರ್ಹತೆ ದಾಖಲೆಗಳ ಜೆರಾಕ್ಸ್‌ ಪ್ರತಿಗಳನ್ನು ಧೃಡೀಕರಿಸಿ, ಅರ್ಜಿಯೊಂದಿಗೆ ಲಗತ್ತಿಸಿ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.

Job Overview
No. of posts
22
Start Date
21 ಸೆಪ್ಟೆಂಬರ್ 2024
End Date
5 ನವೆಂಬರ್ 2024
Employment Type
FULL_TIME
Organization
KPSC Vaani (Website)
Location
ಮೈಸೂರು, KA,
Selection Procedure:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.


ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 05/11/2024. ಅಭ್ಯರ್ಥಿಗಳು ಅರ್ಜಿಯನ್ನು ಆಫ್ ಲೈನ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದಾಗಿರುತ್ತದೆ. 
ಅರ್ಜಿ ಸಲ್ಲಿಸಬೇಕಾದ ವಿಳಾಸ : 
The Chief Administrative Officer, 
Office of the Chief Administrative Officer, 
All India Institute of Speech and Hearing, 
Manasagangothri, Mysore-570006.

Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನೇಮಕಾತಿ ನಿಯಮಾನುಸಾರ BE/ B.Sc/ MA/ MBBS ವಿದ್ಯಾರ್ಹತೆಯನ್ನು ಕನಿಷ್ಠ 55% ಅಂಕಗಳೊಂದಿಗೆ ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗವುದು.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ 30 ವರ್ಷ ವಯೋಮಿತಿಯನ್ನು  ಮೀರಿರಬಾರದು.
To Download Official Notification
Related Tags: Degree Engineering

Comments