➤ ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಓಜೋನ್ ಪದರ ಸಂರಕ್ಷಣಾ ದಿನ (World Ozone Day) ವನ್ನು ಆಚರಿಸಲಾಗುತ್ತದೆ. ಭೂಮಿಯ ಮೇಲಿನ ಜೀವಸಂಕುಲಕ್ಕೆ ಕವಚದಂತೆ ಕಾರ್ಯನಿರ್ವಹಿಸುವ ಓಜೋನ್ ಪದರವನ್ನು ರಕ್ಷಿಸಲು ಮತ್ತು ವಾಯುಮಾಲಿನ್ಯ ನಿಯಂತ್ರಿಸುವ ಕುರಿತು ಜಾಗೃತಿ ಮೂಡಿಸಲು ಈ ದಿನ ಅತ್ಯಂತ ಪ್ರಮುಖವಾಗಿದೆ.
➤ ಓಜೋನ್ ಪದರವು ಭೂಮಿಯ ವಾಯುಮಂಡಲದ ಸ್ಟ್ರಾಟೋಸ್ಫಿಯರ್ (Stratosphere) ಪದರದಲ್ಲಿದೆ (ಭೂಮಿಯಿಂದ ಸುಮಾರು 10 ಕಿ.ಮೀ ನಿಂದ 40 ಕಿ.ಮೀ ಎತ್ತರದಲ್ಲಿ). ಇದು ಸೂರ್ಯನಿಂದ ಬರುವ ಹಾನಿಕಾರಕ ಅಲ್ಟ್ರಾವೈಲೆಟ್ (UV-B) ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವ ಮೂಲಕ ಭೂಮಿಯನ್ನು ರಕ್ಷಿಸುತ್ತದೆ.
- ವಿಯನ್ನಾ ಸಮಾವೇಶ (Vienna Convention): 1985 (ಓಜೋನ್ ರಕ್ಷಣೆಗೆ ಜಾಗತಿಕ ಚೌಕಟ್ಟು).
- ಮಾಂಟ್ರಿಯಲ್ ಪ್ರೋಟೋಕಾಲ್ (Montreal Protocol): ಸೆಪ್ಟೆಂಬರ್ 16, 1987 ರಂದು ಸಹಿ ಮಾಡಲಾಯಿತು (ಓಜೋನ್ ನಾಶಕ ರಾಸಾಯನಿಕಗಳ ನಿಯಂತ್ರಣ).
- ಕಿಟಾಲಿ ತಿದ್ದುಪಡಿ (Kigali Amendment): Hydrofluorocarbons (HFCs) ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲು 2016 ರಲ್ಲಿ ತರಲಾದ ಪ್ರಮುಖ ತಿದ್ದುಪಡಿ.
ಇಂಡಿಯಾ ಕೂಲಿಂಗ್ ಆಕ್ಷನ್ ಪ್ಲಾನ್ (ICAP): ಭಾರತವು ಪರಿಸರ ಸಂರಕ್ಷಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. 2019 ರಲ್ಲಿ ಭಾರತವು ತನ್ನದೇ ಆದ India Cooling Action Plan (ICAP) ಅನ್ನು ಬಿಡುಗಡೆ ಮಾಡಿದ ವಿಶ್ವದ ಮೊದಲ ದೇಶಗಳಲ್ಲಿ ಒಂದಾಯಿತು.
- ಗುರಿ: 2037-38 ರ ವೇಳೆಗೆ ವಿವಿಧ ವಲಯಗಳಲ್ಲಿ ಕೂಲಿಂಗ್ ಬೇಡಿಕೆಯನ್ನು ಶೇ. 20 ರಿಂದ 25 ರಷ್ಟು ಕಡಿಮೆ ಮಾಡುವುದು.
- ಶೀತಲ ಸರಪಳಿ (Cold Chain): ಕೃಷಿ ಉತ್ಪನ್ನಗಳ ರಕ್ಷಣೆ, ಹಸಿರು ಕಟ್ಟಡಗಳ ನಿರ್ಮಾಣ ಮತ್ತು ಶಕ್ತಿ-ಸಮರ್ಥ ತಂತ್ರಜ್ಞಾನಗಳ ಪ್ರೋತ್ಸಾಹ.
ಅಸ್ಸಾಂ ಕೂಲಿಂಗ್ ಆಕ್ಷನ್ ಪ್ಲಾನ್ (Assam Cooling Action Plan): ರಾಷ್ಟ್ರೀಯ ಮಟ್ಟದ ICAP ಮಾದರಿಯನ್ನು ಆಧರಿಸಿ, ರಾಜ್ಯ ಮಟ್ಟದಲ್ಲಿ ಕೂಲಿಂಗ್ ತಂತ್ರಜ್ಞಾನ ಮತ್ತು ವಾಯುಗುಣ ಸ್ಥಿರತೆಯನ್ನು ಸಾಧಿಸಲು ಅಸ್ಸಾಂ ರಾಜ್ಯವು ತನ್ನದೇ ಆದ ಕೂಲಿಂಗ್ ಆಕ್ಷನ್ ಪ್ಲಾನ್ ಅನ್ನು ಚಾಲನೆಗೊಳಿಸಿದೆ.
- ರಾಜ್ಯ ಮಟ್ಟದ ಶೀತಲ ಯೋಜನೆ: ಈಶಾನ್ಯ ಭಾರತದಲ್ಲಿ ಹವಾಮಾನ ವೈಪರೀತ್ಯ ಹಾಗೂ ತಾಪಮಾನ ಏರಿಕೆಯನ್ನು ತಡೆಯಲು ಕಟ್ಟಡಗಳ ವಿನ್ಯಾಸ, ಸಾರಿಗೆ ಮತ್ತು ಕೃಷಿ ವಲಯದಲ್ಲಿ ಪರಿಸರಸ್ನೇಹಿ ಶೀತಲ ವ್ಯವಸ್ಥೆಯನ್ನು ಜಾರಿಗೆ ತರುವುದು.
- ವಿಶ್ವ ಸಂಸ್ಥೆ ಮತ್ತು WRI ಬೆಂಬಲ: WRI India (World Resources Institute) ನಂತಹ ಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆಯು ಕಾರ್ಯಗತಗೊಳ್ಳುತ್ತಿದ್ದು, ಇತರ ರಾಜ್ಯಗಳಿಗೂ ಮಾದರಿಯಾಗಿದೆ.

ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ