* ಜಪಾನ ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಪದಕಗಳ ಪಟ್ಟಿಯಲ್ಲಿ ಭಾರತ 5 ಚಿನ್ನ, 4 ಬೆಳ್ಳಿ, 2 ಕಂಚು ಒಟ್ಟು 11 ಪದಕಗಳನ್ನು ಪಡೆಯುವ ಮೂಲಕ ಪದಕಗಳ ಪಟ್ಟಿಯಲ್ಲಿ ಭಾರತವು 3 ನೇ ಸ್ಥಾನದಲ್ಲಿದೆ.
* ಚೀನಾ ದೇಶ 15 ಚಿನ್ನ 13 ಬೆಳ್ಳಿ 13 ಕಂಚು ಮತ್ತು ಬ್ರೆಜಿಲ್ 14 ಚಿನ್ನ 6 ಬೆಳ್ಳಿ 5 ಕಂಚು ಪದಕಗಳನ್ನು ಪಡೆಯುವ ಮೂಲಕ ಚೀನಾ ಮತ್ತು ಬ್ರೆಜಿಲ್ ಕ್ರಮವಾಗಿ 1 ಮತ್ತು 2 ನೇ ಸ್ಥಾನದಲ್ಲಿವೆ.
* ಹಾಲಿ ಪ್ಯಾರಾಲಿಂಪಿಕ್ಸ್ ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಸುಮಿತ್ ಅಂತಿಲ್ ಅವರು ಪುರುಷರ ಜಾವೆಲಿನ್ ಥ್ರೋ (69.50 ಮೀಟರ್ ದೂರ) ಎಸೆತದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
* ತಂಗವೇಲು ಮರಿಯಪ್ಪನ್ ಮತ್ತು ಏಕ್ತಾ ಭಯಾನ್ ಕೂಡ ತಮ್ಮ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು.
* ಜಾವೆಲಿನ್ ಎಸೆದು ಸ್ಪರ್ಧೆಯಲ್ಲಿ ಸಂದೀಪ್ 60.41 ಮೀ ದೂರ ಎಸೆದು ಕಂಚಿನ ಪದಕ ಗೆದ್ದರು ಹಾಗೂ ಶ್ರೀಲಂಕಾದ ದುಲಾನ್ ಕೊಡಿತುವಕ್ಕು 66.49 ಮೀ ಎಸೆದು ಬೆಳ್ಳಿ ಪಡೆದರು.
* ಎಫ್ 51 ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಏಕ್ತಾ ಭಯ್ 20.12 ಮೀಟರ್ ಎಸೆದು ಋತುವಿನ ಅತ್ಯುತ್ತಮ ಸಾಧನೆಯ ಚಿನ್ನದ ಪದಕವನ್ನು ಪಡೆದುಕೊಂಡರು. ಸ್ವದೇಶದ ಕಾಶಿಶ್ ಲಾಕ್ರಾ 14.56 ಮೀಟರ್ ದೂರ ಕ್ರಮಿಸಿ ಬೆಳ್ಳಿ ಪದಕ ಜಯಸಿದ್ದಾರೆ.
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ : ಪದಕ ಪಟ್ಟಿಯಲ್ಲಿ ಭಾರತಕ್ಕೆ 3ನೇ ಸ್ಥಾನ
Published by Yallamma G
23 ಮೇ 2024