* ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಮನ್ನಣೆ ನೀಡುವುದಾಗಿ ನಾರ್ವೆ, ಸ್ಪೇನ್ ಮತ್ತು ಐರ್ಲೆಂಡ್ ದೇಶಗಳು ಹೇಳಿವೆ, ಈ ಐತಿಹಾಸಿಕ ಘೋಷಣೆಯನ್ನು ಪ್ಯಾಲೆಸ್ಟೀನಿನ ಜನ ಸಂಭ್ರಮದಿಂದ ಸ್ವಾಗತಿಸಿದ್ದಾರೆ.
* ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಮನ್ನಣೆ ನೀಡುವ ಈ ಘೋಷಣೆಯನ್ನು ಇಸ್ರೇಲ್ ಖಂಡಿಸಿದೆ. ನಾರ್ವೆ ಮತ್ತು ಐರ್ಲೆಂಡ್‌ನಲ್ಲಿ ಇರುವ ಇಸ್ರೇಲ್ ರಾಯಭಾರಿಗಳು ವಾಪಸಾಗಬೇಕು ಎಂದು ಇಸ್ರೇಲ್ ಸೂಚಿಸಿದೆ.
* ಪ್ಯಾಲೆಸ್ಟೀನ್‌ಗೆ ಮಾನ್ಯತೆ ನೀಡುವ ತೀರ್ಮಾನವನ್ನು ನಾರ್ವೆ ಮೊದಲು ಪ್ರಕಟಿಸಿತು. ನಾರ್ವೆ ಪ್ರಧಾನಿ ಯೂನಸ್ ಗಾರ್ ಸ್ತೋರ ಅವರು 'ಮಾನ್ಯತೆ ಇಲ್ಲವಾದರೆ ಮಧ್ಯಪ್ರಾಚ್ಯದಲ್ಲಿ ಶಾಂತಿ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಪ್ಯಾಲೆಸ್ಟೀನ್ ರಾಷ್ಟ್ರವನ್ನು ಮಾನ್ಯ ಮಾಡುವ ಮೂಲಕ ನಾರ್ವೆ, ಅರಬ್ ಶಾಂತಿ ಯೋಜನೆಯನ್ನು ಬೆಂಬಲಿಸುತ್ತಿದೆ ಎಂದು ಹೇಳಿದ್ದಾರೆ.
* ದೀರ್ಘಾವಧಿಗೆ ಶಾಂತಿ ನೆಲೆಸಬೇಕು ಎಂದಾದರೆ ದ್ವಿರಾಷ್ಟ್ರ ಸೂತ್ರದ ಪಾಲನೆ ಅಗತ್ಯ ಹಾಗೂ ಪ್ಯಾಲೆಸ್ಟೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡುವ ಯೋಚನೆ ತಮಗೆ ಇದೆ ಎಂಬ ಮಾತನ್ನು ಐರೋಪ್ಯ ಒಕ್ಕೂಟದ ಹಲವು ದೇಶಗಳು ತಿಳಿಸಿವೆ.
* 'ಈ ಕ್ರಮವು ಗತಕಾಲವನ್ನು, ಪ್ಯಾಲೆಸ್ಟೀನ್‌ನಲ್ಲಿ ಮೃತಪಟ್ಟವರ ಜೀವವನ್ನು ಮರಳಿ ತರುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಆದರೆ ಇದು ಪ್ಯಾಲೆಸ್ಟೀನ್ ನಾಗರಿಕರ ವರ್ತಮಾನ ಮತ್ತು ಭವಿಷ್ಯಕ್ಕೆ ಬಹುಮುಖ್ಯವಾಗಿರುವ ಘನತೆ ಹಾಗೂ ಭರವಸೆಯನ್ನು ತರುತ್ತದೆ' ಎಂದು ಸ್ಪೇನ್ ಪ್ರಧಾನಿ ಪೆಟ್ರೊ ಸ್ಯಾಂಚೆಸ್ ಹೇಳಿದ್ದಾರೆ.
ಗುರುವಾರ, 23 ಮೇ 2024
11:39 ಪೂರ್ವಾಹ್ನ
Daily PDF
'ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಮನ್ನಣೆ ನೀಡಲು ನಾರ್ವೆ, ಸ್ಪೇನ್, ಐರ್ಲೆಂಡ್ ತೀರ್ಮಾನ
Authored by:
Yallamma G