* ಭಾರತದ ಸಚಿನ್ ಸರ್ಜೆರಾವ್ ಖಿಲಾರಿ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ಶಾಟ್‌ಪುಟ್ ಎಫ್ 46 ವಿಭಾಗದಲ್ಲಿ ಮೇ 22 ರಂದು ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಜಯಿಸಿದ್ದಾರೆ.
* ಭಾರತ ಇದುವರೆಗೆ 5 ಚಿನ್ನ, 4 ಬೆಳ್ಳಿ ಹಾಗೂ 2 ಕಂಚು ಸೇರಿ ಒಟ್ಟು 11 ಪದಕ ಜಯಿಸಿರುವ ಭಾರತ ಇತಿಹಾಸದಲ್ಲಿ ಪದಕದ ಸಾಧನೆ ಮಾಡಿದೆ. 2023ರ ಕೂಟದಲ್ಲಿ 3 ಚಿನ್ನ, 4 ಬೆಳ್ಳಿ, 3 ಕಂಚು ಸೇರಿ 10 ಪದಕ ಜಯಿಸಿದ್ದು ಹಿಂದಿನ ಗರಿಷ್ಠ ಸಾಧನೆಯಾಗಿತ್ತು.
* ಶಾಟ್‌ಪುಟ್ ಸ್ಪರ್ಧೆಯ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದ ಸಚಿನ್ ಸರ್ಜೆರಾವ್ ಖಿಲಾರಿ ಅವರು 16.30ಮೀಟರ್ ದೂರದ ಎಸೆತದೊಂದಿಗೆ ಏಷ್ಯನ್ ದಾಖಲೆ ರಚಿಸಿದರು.
* ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದ ಟೂರ್ನಿಯಲ್ಲಿ 16.21 ಮೀಟರ್ ದೂರದ ಎಸೆತ ಹಿಂದಿನ ಏಷ್ಯನ್ ದಾಖಲೆ ಆಗಿತ್ತು. ಪದಕ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನದಲ್ಲಿದ್ದು, ಬ್ರೆಜಿಲ್ ನಂತರದ ಸ್ಥಾನದಲ್ಲಿತ್ತು.
* ಧರಮ್ ವೀರ್ ಪುರುಷರ ಕ್ಲಬ್ ಪ್ರೊ (ಎಫ್ 51 ಕೆಟಗರಿ) ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಂಡರು.
ಗುರುವಾರ, 23 ಮೇ 2024
11:32 ಪೂರ್ವಾಹ್ನ
Daily PDF
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ : ಭಾರತಕ್ಕೆ 5ನೇ ಸ್ವರ್ಣ ಪದಕ
Authored by:
Bhagya R K