* ಭಾರತೀಯ ರಿಸರ್ವ್ ಬ್ಯಾಂಕ್ 2023-24 ರ ಆರ್ಥಿಕ ವರ್ಷಕ್ಕೆ 2.11 ಲಕ್ಷ ಕೋಟಿ ರೂಪಾಯಿಗಳ ಲಾಭಾಂಶ ಪಾವತಿಯನ್ನು ಪಾವತಿಸುವುದಾಗಿ ಒಪ್ಪಿಗೆ ನೀಡಿದೆ. 2022-23ರ ಹಣಕಾಸು ವರ್ಷದಲ್ಲಿ 87,416 ಕೋಟಿ ರೂ. ಆರ್‌ಬಿಐ ಲಾಭಂಶವನ್ನು ಪಾವತಿಸಲಾಗಿತ್ತು.
* ಮುಂಬೈನಲ್ಲಿ ನಡೆದ ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರೀಯ ನಿರ್ದೇಶಕರ ಮಂಡಳಿಯ 608 ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
* ಆರ್‌ಬಿಐ ಮಂಡಳಿಯು ಜಾಗತಿಕ ಮತ್ತು ದೇಶೀಯ ಪರಿಸ್ಥಿತಿಗಳೊಂದಿಗೆ ಆರ್ಥಿಕ ದೃಷ್ಟಿಕೋನಕ್ಕೆ ಅಪಾಯಗಳನ್ನು ಸೇರಿಸಿದೆ. ರಿಸರ್ವ್ ಬ್ಯಾಂಕಿನ ಮಂಡಳಿಯು ಏಪ್ರಿಲ್ 2023 ರಿಂದ ಮಾರ್ಚ್ 2024 ರ ಅವಧಿಯಲ್ಲಿ ರಿಸರ್ವ್ ಬ್ಯಾಂಕಿನ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿತು. ಇದರೊಂದಿಗೆ, 2023-24 ರ ಹಣಕಾಸು ವರ್ಷದ ರಿಸರ್ವ್ ಬ್ಯಾಂಕ್‌ನ ವಾರ್ಷಿಕ ವರದಿ ಮತ್ತು ಹಣಕಾಸು ಹೇಳಿಕೆಗಳನ್ನು ಅನುಮೋದಿಸಲಾಗಿದೆ.
* ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು 17.34 ಲಕ್ಷ ಕೋಟಿ ರೂ.(ಜಿಡಿಪಿಯ ಶೇ.5.1)ಗಳಿಗೆ ನಿಯಂತ್ರಿಸುವ ಗುರಿಯನ್ನು ಕೇಂದ್ರ ಸರಕಾರವು ಹೊಂದಿದೆ.
ಗುರುವಾರ, 23 ಮೇ 2024
12:43 ಅಪರಾಹ್ನ
Daily PDF
ಕೇಂದ್ರ ಸರ್ಕಾರಕ್ಕೆ ದಾಖಲೆಯ ₹2.11 ಲಕ್ಷ ಕೋಟಿ ಲಾಭಾಂಶ ನೀಡಲು RBI ಅನುಮೋದನೆ
Authored by:
Yallamma G