➤ ರಾಜ್ಯದ ನಾಗರಿಕ ಸೇವಾ ಕೇಂದ್ರಗಳು ಇನ್ನು ಮುಂದೆ 'ಪ್ರಜಾ ಸೇವಾ ಕೇಂದ್ರ': ರಾಜ್ಯಾದ್ಯಂತ ವಿವಿಧ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗರಿಕ ಸೇವಾ ಕೇಂದ್ರಗಳನ್ನು ಏಕರೂಪದ ಉದ್ದೇಶದಿಂದ ತಕ್ಷಣ ಜಾರಿಗೆ ಬರುವಂತೆ 'ಪ್ರಜಾ ಸೇವಾ ಕೇಂದ್ರ' ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
➤ ವಾಹನಗಳ ಪಿಯುಸಿ ಮಾನ್ಯತಾ ಅವಧಿ ಪರಿಷ್ಕರಣೆ: ಕೇಂದ್ರ ಸರ್ಕಾರವು 'ಕೇಂದ್ರ ಮೋಟಾರು ವಾಹನಗಳ 16ನೇ ತಿದ್ದುಪಡಿ ನಿಯಮಗಳು-2026' ಜಾರಿಗೊಳಿಸಿದ್ದು, ವಾಹನದ ಬಳಕೆಯ ಅವಧಿ ಮತ್ತು ಮಾಲಿನ್ಯ ಮಾನದಂಡಗಳಿಗೆ ಅನುಗುಣವಾಗಿ ಪಿಯುಸಿ (PUC) ನವೀಕರಣ ಅವಧಿಯನ್ನು ನಿಗದಿಪಡಿಸಿದೆ.
➤ ಅಂಡಮಾನ್ ಮತ್ತು ನಿಕೋಬಾರ್ ಕಾರಾಗೃಹ ಕಾಯ್ದೆಯಲ್ಲಿ ಐತಿಹಾಸಿಕ ಸುಧಾರಣೆ: ಬ್ರಿಟಿಷ್ ಆಳ್ವಿಕೆಯ 132 ವರ್ಷಗಳ ಹಳೆಯ ಜೈಲು ಕಾನೂನುಗಳನ್ನು ರದ್ದುಗೊಳಿಸಿ, 'ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ನಿಯಂತ್ರಣ-2026' ಅನ್ನು ಜಾರಿಗೆ ತರಲಾಗಿದೆ.
➤ ಭಾರತದ ನವೀಕರಿಸಬಹುದಾದ ಇಂಧನ ಯೋಜನೆಗೆ ಅಮೆಜಾನ್ 7 ಶತಕೋಟಿ ಡಾಲರ್ ಹೂಡಿಕೆ: 2030ರ ವೇಳೆಗೆ ಭಾರತದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿ ಹೆಚ್ಚುವರಿಯಾಗಿ 7 ಶತಕೋಟಿ ಡಾಲರ್ ಹೂಡಿಕೆ ಮಾಡಲು ಇ-ಕಾಮರ್ಸ್ ಸಂಸ್ಥೆಯಾದ ಅಮೆಜಾನ್ ಯೋಜನೆ ರೂಪಿಸಿದೆ.
➤ ದೆಹಲಿಯ 'ಶೀಶ್ ಮಹಲ್' ಬಂಗಲೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ: ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವಾಸವಿದ್ದ ದೆಹಲಿಯ 'ಶೀಶ್ ಮಹಲ್' ಸರ್ಕಾರಿ ಬಂಗಲೆಯನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
➤ ಜಾಗತಿಕ ಪ್ರಭಾವಶಾಲಿ ಮುಸ್ಲಿಮರ ಪಟ್ಟಿಯಲ್ಲಿ ಪಾಕ್ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರು: ಸೌದಿ ಅರೇಬಿಯಾ ಹಾಗೂ ಟರ್ಕಿ ಜೊತೆ ಪಾಕಿಸ್ತಾನ 'ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ'ಕ್ಕೆ ಸಹಿ ಹಾಕಿದ ಬಳಿಕ ಜಾಗತಿಕ ಪ್ರಭಾವಶಾಲಿ ಮುಸ್ಲಿಂ ನಾಯಕರ ಪಟ್ಟಿಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಶ್ರೇಯಾಂಕ ಬದಲಾಗಿದೆ.
➤ ಕುಮಾರಕೃಪಾ ಅತಿಥಿ ಗೃಹದ ಹಳೆಯ ಕಟ್ಟಡ 'ಗಂಗಾ' ಮುಖ್ಯಮಂತ್ರಿಗಳ ಅಧಿಕೃತ ನಿವಾಸ: ಕುಮಾರಕೃಪಾ ಅತಿಥಿ ಗೃಹದ ಹಳೆಯ ಕಟ್ಟಡಕ್ಕೆ 'ಗಂಗಾ' ಎಂದು ಮರುನಾಮಕರಣ ಮಾಡಿರುವ ರಾಜ್ಯ ಸರ್ಕಾರ, ಇನ್ನು ಮುಂದೆ ಆ ಕಟ್ಟಡವನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸವೆಂದು ಘೋಷಿಸಿದೆ.
➤ ಸೋನಿಯಾ ಗಾಂಧಿ ಅವರ ಪೂರ್ವಜರ ಮನೆ ವಸ್ತುಸಂಗ್ರಹಾಲಯವಾಗಿ ಪರಿವರ್ತನೆಗೆ ಮುಂದು: ಇಟಲಿಯ ಲೂಸಿಯಾನಾ ಗ್ರಾಮದಲ್ಲಿರುವ ಸೋನಿಯಾ ಗಾಂಧಿ ಅವರ ಪೂರ್ವಜರ ಆರು ಕೊಠಡಿಗಳ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಅನಿವಾಸಿ ಸಿಖ್ ಮುಖಂಡ ಸುಖದೇವ್ ಸಿಂಗ್ ಕಾಂಗ್ ಮುಂದಾಗಿದ್ದಾರೆ.
➤ ಅಮೆರಿಕದ ಹಂಗಾಮಿ ರಾಷ್ಟ್ರೀಯ ಸೈಬರ್ ನಿರ್ದೇಶಕರಾಗಿ ಕರ್ಸ್ಟನ್ ಎ. ಡೇವಿಸ್ ನೇಮಕ: ಅಮೆರಿಕದ ಹಂಗಾಮಿ ರಾಷ್ಟ್ರೀಯ ಸೈಬರ್ ನಿರ್ದೇಶಕರನ್ನಾಗಿ ಕರ್ಸ್ಟನ್ ಎ. ಡೇವಿಸ್ ಅವರನ್ನು ಶ್ವೇತಭವನ ನೇಮಿಸಿದೆ.
➤ ಜಾಮ್‌ನಗರದಲ್ಲಿ ಭಾರತೀಯ ವಾಯುಪಡೆಯಿಂದ 'ಸಹಾಯತಾ ಸೇತು 2026' ವಿಪತ್ತು ನಿರ್ವಹಣಾ ಸಮರಾಭ್ಯಾಸ: ಗುಜರಾತ್‌ನ ಜಾಮ್‌ನಗರದಲ್ಲಿ ನವೆಂಬರ್ 17ರಿಂದ 19ರವರೆಗೆ ಭಾರತೀಯ ವಾಯುಪಡೆಯ ನೇತೃತ್ವದಲ್ಲಿ ಬಹುರಾಷ್ಟ್ರೀಯ 'ಸಹಾಯತಾ ಸೇತು 2026' ವಿಪತ್ತು ನಿರ್ವಹಣಾ ಸಮರಾಭ್ಯಾಸವನ್ನು ನಡೆಸಲಾಯಿತು.
➤ ನವದೆಹಲಿಯಲ್ಲಿ 'ಪಿಎಂ ಸ್ವನಿಧಿ ಸಮ್ಮಾನ್ ಪ್ರಶಸ್ತಿ 2026' ಪ್ರದಾನ ಸಮಾರಂಭ: ಬೀದಿ ವ್ಯಾಪಾರಿಗಳ ಜೀವನೋಪಾಯ, ಆರ್ಥಿಕ ಸೇರ್ಪಡೆ ಮತ್ತು ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಉದ್ದೇಶದಿಂದ ನವೆಂಬರ್ 20ರಂದು ದೆಹಲಿಯಲ್ಲಿ 'ಪಿಎಂ ಸ್ವನಿಧಿ ಸಮ್ಮಾನ್ ಪ್ರಶಸ್ತಿ 2026' ಪ್ರದಾನ ಸಮಾರಂಭ ಜರುಗಿತು.
➤ ಅಮೆರಿಕದ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ 2026: 'ಪ್ಯಾರಡಿಸೊ 17' ಕಾದಂಬರಿಗೆ ಗೌರವ: ಅಮೆರಿಕದ 77ನೇ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ಸಮಾರಂಭದಲ್ಲಿ ಹನ್ನಾ ಲಿಲ್ಲಿತ್ ಅಸ್ಸಾದಿ ಅವರ 'ಪ್ಯಾರಡಿಸೊ 17' ಕಾದಂಬರಿಗೆ 2026ರ ಕಾದಂಬರಿ ವಿಭಾಗದ ಪ್ರಶಸ್ತಿ ಲಭಿಸಿದೆ.
➤ ಭಾರತ ಮತ್ತು ತಾಂಜಾನಿಯಾ ನಡುವೆ ನೇರ ವಿಮಾನ ಸೇವೆ ಆರಂಭಿಸಿದ ಇಂಡಿಗೋ: ಭಾರತ ಮತ್ತು ತಾಂಜಾನಿಯಾ ನಡುವೆ ನೇರ ವಿಮಾನ ಸಂಪರ್ಕ ಕಲ್ಪಿಸಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇಂಡಿಗೋ ಪಾತ್ರವಾಗಿದ್ದು, ನವೆಂಬರ್ 20ರಿಂದ ಮುಂಬೈ-ದಾರ್‌ಎಸ್ ಸಲಾಂ ನಡುವೆ ಪ್ರತಿದಿನ ವಿಮಾನ ಸೇವೆ ಆರಂಭಿಸಿದೆ.
ಪ್ರಮುಖ ಸುದ್ದಿಗಳು 23-11-2026
Published by
Akshata Halli
2 hours ago