* ವಿಶ್ವ ಬ್ಯಾಂಕ್‌ನ 14ನೇ ಅಧ್ಯಕ್ಷರಾಗಿ ಅಜಯ್ ಬಂಗಾ ಅವರು ಅಧಿಕಾರ ಸ್ವೀಕರಿಸಿದ್ದಾರೆ.  
* ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಬಂಗಾ ಅವರ ಹೆಸರನ್ನು ಸೂಚಿಸುತ್ತೇನೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಫೆಬ್ರವರಿಯಲ್ಲಿ ಘೋಷಿಸಿದ್ದರು. ಈ ಮೂಲಕ ಬಂಗಾ ಅವರು ಈ ಹುದ್ದೆಯನ್ನು ಅಲಂಕರಿಸಿದ ಭಾರತದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
* ಬಂಗಾ ಅವರಿಗೆ ಕೇಂದ್ರ ಸರಕಾರವಿ 2016ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ.
* ಅಭಿವೃದ್ಧಿ ಹೊಂದುತ್ತಿರುವ ಮತ್ತು ಉದಯೋನ್ಮುಖ ಆರ್ಥಿಕತೆಗಳಿಂದ ಕೂಡಿರು ವಿಶ್ವಬ್ಯಾಂಕ್​ನ ಅಧ್ಯಕ್ಷ ಸ್ಥಾನದ ಮೇಲೆ ಅಮೆರಿಕದ ಹಿಡಿತ ನಿರಂತರವಾಗಿ ಮುಂದುವರಿದಿದೆ ಎಂಬ ಇತರ ದೇಶಗಳ ಅಸಮಾಧಾನ ಹೆಚ್ಚುತ್ತಿರುವ ಹೊರತಾಗಿಯೂ, ಭಾರತದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ ಮತ್ತು ಅಮೆರಿಕ ಪ್ರಜೆಯಾಗಿರುವ 63 ವರ್ಷದ ಬಂಗಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದರೊಂದಿಗೆ ಅಮೆರಿಕದ ಹಿಡಿತ ಮತ್ತೆ ಮುಂದುವರಿದಿದೆ.