* ಸ್ವೀಡನ್ ದೇಶದ ಲಿನ್ ಕೋಪಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ಕೃತಕವಾದ ' ಇ-ಮಣ್ಣು' ಆವಿಷ್ಕರಿಸಿದ್ದಾರೆ.
* ಇ-ಮಣ್ಣು ಇದರ ವಿಸ್ತೃತ ರೂಪ - ಎಲೆಕ್ಟ್ರಾನಿಕ್ ಮಣ್ಣು. ಇಂಗ್ಲಿಷ್ ನಲ್ಲಿ ಇದನ್ನು electronic soil ಎಂದು ಕೂಡ ಕರೆಯುತ್ತಾರೆ.
* ಆವಿಷ್ಕರಿಸಿದ ಈ ಕೃತಕ ಮಣ್ಣನ್ನು ಹೈಡ್ರಫೋನಿಕ್ಸ್ ವಿಧಾನ ಬಳಸಿ ಬೆಳೆಯುವ ಬೆಳೆಗಳಿಗೆ ಬಳಸಬಹುದಾಗಿದೆ. hydroponic ವಿಧಾನದ ಬೆಳೆ ಬೆಳೆಯಲು 'ಇ-ಮಣ್ಣು' ಬಹಳ ಸಹಕಾರಿಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
* ಹೈಡ್ರೋಫೋನಿಕ್ಸ್ ವಿಧಾನ ಬಳಸಿ ಬೆಳೆಯುವ ಬೆಳೆಗಳಲ್ಲಿ ಮಣ್ಣನ್ನು ಬಳಸದೆ ಬೇರುಗಳಿಗೆ ವಿಶೇಷ ಪದಾರ್ಥಗಳ ಮೂಲಕ ವಿದ್ಯುತ್ ಹಾಯಿಸಿ ಚಾರ್ಜ್ ಮಾಡಿ ಬೆಳೆ ಬೆಳೆಯಲಾಗುತ್ತದೆ.
* ಈ ಹೊಸ ಆವಿಷ್ಕಾರದಿಂದ ನಗರ ಪ್ರದೇಶಗಳಲ್ಲಿಯೂ ಕೂಡ ಕೃಷಿ ಚಟುವಟಿಕೆ ನಡೆಸಲು ಅನುವು ಮಾಡಿಕೊಟ್ಟಿದೆ.
ಗುರುವಾರ, 28 ಡಿಸೆಂಬರ್ 2023
11:17 ಪೂರ್ವಾಹ್ನ
Daily PDF
ಸ್ವೀಡನ್ ಸಂಶೋಧಕರಿಂದ ಕೃತಕವಾದ ಇ-ಮಣ್ಣು ಆವಿಷ್ಕಾರ
Authored by:
Yallamma G