* ಸುಳ್ಳು ಸುದ್ದಿ ಹರಡಿಸುವುದನ್ನು " ಡಿಪ್ ಫೇಕ್ " ಎಂದು ಕರೆಯಲಾಗುತ್ತದೆ. ಡಿಪ್ ಫೇಕ್ ಸೇರಿದಂತೆ ನಿರ್ಬಂಧಿತ ವಿಷಯಗಳ ಕುರಿತು ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಹೊರಡಿಸಿದೆ.
* ಸಾಮಾಜಿಕ ಜಾಲತಾಣದಲ್ಲಿ, ಐಟಿ ನಿಯಮಗಳ ಅನುಸಾರ ಬಳಕೆದಾರರು ಯಾವುದೇ ರೀತಿಯ ಸುಳ್ಳು ಸುದ್ದಿ, ಡಿಪ್ ಫೇಕ್ ವಿಡಿಯೋಗಳನ್ನು ಪ್ರಸಾರ ಹಾಗೂ ಮತ್ತೊಬ್ಬರಿಗೆ ಫಾರ್ವರ್ಡ್ ಮಾಡದಂತೆ ಜಾಲತಾಣ ಸಂಸ್ಥೆಗಳು ನಿಗಾ ವಹಿಸಬೇಕು.
* ಡಿಪ್ ಫೇಕ್ ಎಂದರೆ - ಜನರ ವ್ಯಕ್ತಿತ್ವ ಹಾನಿ, ಅಶ್ಲೀಲ ಹಾಗೂ ಮಾನಹಾನಿಯಂಥ ವಿಷಯಗಳು. ಇವುಗಳನ್ನು ಜಾಲತಾಣದಲ್ಲಿ ಪ್ರಸಾರ ಹಾಗೂ ಮತ್ತೊಬ್ಬರಿಗೆ ಶೇರ್ ಮಾಡದಂತೆ ನಿರ್ಬಂಧನೆ ಮಾಡಬೇಕು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
* ಐಟಿ ನಿಯಮ 3 ( 1 ) ( ಬಿ ) ಅಡಿಯಲ್ಲಿ ಈ ಡೀಪ್ ಫೇಕ್ ವಿಷಯಗಳನ್ನು ಪ್ರಸಾರ ಹಾಗೂ ಮತ್ತೊಬ್ಬರಿಗೆ ಶೇರ್ ಮಾಡದಂತೆ ನಿರ್ಬಂಧಿತ ವಿಷಯಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಲು ಮತ್ತು ಜಾಲತಾಣಕ್ಕೆ ಪ್ರವೇಶ ಮಾಡಿದಾಗ ಬಳಕೆದಾರರಿಗೆ ಐಟಿ ನಿಯಮ ಉಲ್ಲಂಘನೆಯ ಕಾನೂನು ಪರಿಣಾಮಗಳ ಬಗ್ಗೆ ಮನವರಿಕೆ ಮಾಡಬೇಕು ಎಂದು ಸಚಿವರು ತಾಕಿತು ಮಾಡಿದ್ದಾರೆ.
ಜಾಲತಾಣದಲ್ಲಿ ಸುಳ್ಳು ಸುದ್ದಿ ಶೇರ್ ಮಾಡುವವರಿಗೆ ಸರ್ಕಾರದಿಂದ ಕಟ್ಟೆಚ್ಚರ
Published by Yallamma G
28 ಡಿಸೆಂಬರ್ 2023