* ರಷ್ಯಾಗೆ ಮುಂದಿನ ವರ್ಷ(2024) ಭೇಟಿ ನೀಡುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಇದು ಎಲ್ಲಾ ಪ್ರಸ್ತುತ ವಿಷಯಗಳ ಕುರಿತು ಚರ್ಚಿಸಲು ಮತ್ತು ದ್ವಿಪಕ್ಷೀಯ ಸಂಬಂಧ ವೃದ್ಧಿಯ ಬಗ್ಗೆ ಮಾತನಾಡಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದ್ದಾರೆ.
* "ನಮ್ಮ ಸ್ನೇಹಿತ ಪ್ರಧಾನಿ ಮೋದಿಯನ್ನು ರಷ್ಯಾದಲ್ಲಿ ನೋಡಲು ನಾವು ಸಂತೋಷಪಡುತ್ತೇವೆ" ಎಂದು ಪುಟಿನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಹೇಳಿದ್ದಾರೆ.
* ಜೈಶಂಕರ್, ಐದು ದಿನಗಳ ಭೇಟಿ ಗಾಗಿ ರಷ್ಯಾಕ್ಕೆ ತೆರಳಿದ್ದು, ಅಲ್ಲಿನ ವಿದೇಶಾಂಗ ಸಚಿವ ಸರ್ಗೈ ಲಾವೊವ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. 'ಮುಂದಿನ ವರ್ಷದ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಪುಟಿನ್ ಅವರು ಭೇಟಿಯಾಗುವ ವಿಶ್ವಾಸ ಇದೆ ಎಂದು ಸರ್ಗೆ ಅವರೂ ಹೇಳಿರುವುದಾಗಿ' ಜೈಶಂಕರ್ ತಿಳಿಸಿದ್ದಾರೆ.
* ಮೋದಿಯವರಿಗೆ ಶುಭ ಹಾರೈಕೆಗಳು ಮತ್ತು ರಷ್ಯಾಗೆ ಬರುವ ಆಹ್ವಾನವನ್ನು ಅವರಿಗೆ ರವಾನಿಸುವಂತೆ ಸಚಿವ ಎಸ್ ಜೈಶಂಕರ್ ಅವರಿಗೆ ಪುಟಿನ್ ಕೇಳಿಕೊಂಡಿದ್ದಾರೆ.
ರಷ್ಯಾಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಪುಟಿನ್
Published by Yallamma G
29 ಡಿಸೆಂಬರ್ 2023