* ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಅವರು ಫೆಬ್ರುವರಿ 04 ರಂದು (ಭಾನುವಾರ) ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ರಚಿಸಿರುವ ತಾತ್ಕಾಲಿಕ ಸಮಿತಿಯು ನಡೆಸಿದ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ನ 55 ಕೆಜಿ ವಿಭಾಗದಲ್ಲಿ ಗೆಲುವು ಸಾಧಿಸಿದ್ದಾರೆ.
* ವಿನೇಶ್ ಫೋಗಟ್ ಅವರು ತಮ್ಮ ಕೌಶಲ್ಯ ಮತ್ತು ಅನುಭವವನ್ನು ಪ್ರದರ್ಶಿಸಿ ಮಧ್ಯಪ್ರದೇಶದ ಜ್ಯೋತಿ ಅವರನ್ನು 4-0 ಅಂತರದಲ್ಲಿ ಮಣಿಸಿದರು. ವಿಶೇಷವಾಗಿ ಅವರು ಇಂದು ಹೆಚ್ಚಿನ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು.
* 2021ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ, ಹರಿಯಾಣದ ಅಂಶು ಮಲಿಕ್ 59 ಕೆಜಿ ವಿಭಾಗದಲ್ಲಿ 2020ರ ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತೆ ಸರಿತಾ ಮೋರ್ (ರೈಲ್ವೇಸ್) ಅವರನ್ನು 8-3 ರಿಂದ ಮಣಿಸಿದರು.
* ಹರಿಯಾಣದ ವನಿತೆಯರು ಕುಸ್ತಿಪಟುಗಳು 189 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಪಡೆದರು ಮತ್ತು ಆರ್‌ಎಸ್‌ಪಿಬಿ 187 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಪಾಂಡಿಚೆರಿ 81 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
* ಪುರುಷರ ಗ್ರೀಕೋ-ರೋಮನ್ ವಿಭಾಗದಲ್ಲಿ ಆರ್‌ಎಸ್‌ಪಿಬಿ 208 ಅಂಕಗಳೊಂದಿಗೆ ಜಯಗಳಿಸಿತು. ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ (127 ಅಂಕಗಳು) ಮತ್ತು ಮಹಾರಾಷ್ಟ್ರ (113 ಅಂಕಗಳು) ಗಳೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.
* ಸ್ಪರ್ಧೆಯ ಕೊನೆಯ ದಿನವಾ ಫೆಬ್ರುವರಿ 05 ರಂದು (ಸೋಮವಾರ) ಪುರುಷರ ಫ್ರೀಸ್ಟೈಲ್ ಸ್ಪರ್ಧೆಗಳು ನಡೆಯಲಿವೆ.
* ರೈಲ್ವೇ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (RSPB) ಪ್ರತಿನಿಧಿಸುತ್ತಿದ್ದ 29 ವರ್ಷದ ವಿನೇಶ್, 2018 ರ ಜಕಾರ್ತಾ ಏಷ್ಯನ್ ಗೇಮ್ಸ್‌ನ 50 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು ಮತ್ತು 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.
ಸೋಮವಾರ, 05 ಫೆಬ್ರುವರಿ 2024
11:30 ಪೂರ್ವಾಹ್ನ
Daily PDF
ಸೀನಿಯರ್ ರಾಷ್ಟ್ರೀಯ ಕುಸ್ತಿ : ವಿನೇಶಾ ಪೋಗಟ್ ಅವರಿಗೆ ಚಿನ್ನ ಪದಕ
Authored by:
Yallamma G