* ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರು ಮುಕೇಶ್ ಅಂಬಾನಿ ಅವರು 'ಬ್ರಾಂಡ್ ಫೈನಾನ್ಸ್' ಸಂಸ್ಥೆ ಬಿಡುಗಡೆಗೊಳಿಸಿದ ಬ್ರಾಂಡ್ ಗಾರ್ಡಿಯನ್ ಶಿಪ್ ಸೂಚ್ಯಂಕ ಪಟ್ಟಿಯಲ್ಲಿ ಭಾರತದ ಉದ್ಯಮಿಗಳಲ್ಲಿ ಮೊದಲ ಹಾಗೂ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
* ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಛೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಮುಕೇಶ್, ಮೈಕ್ರೋಸಾಫ್ಟ್‌ನ ಸತ್ಯಾ ನಾದೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ, ಆ್ಯಪಲ್ ಸಂಸ್ಥೆಯ ಟಿಮ್ ಕುಕ್, ಟೆಸ್ಲಾದ ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದಿದ್ದಾರೆ. ಟೆನ್ಸೆಂಟ್‌ನ ಹುವಾಟೆಂಗ್ ಮಾ 1 ನೇ ಸ್ಥಾನದಲ್ಲಿದ್ದಾರೆ.
* ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ 2023 ರ ಶ್ರೇಯಾಂಕದಲ್ಲಿ ನಂ.8 ರಿಂದ ನಂ.5 ಸ್ಥಾನದಲ್ಲಿದ್ದಾರೆ. ಅವರ ನಂತರ ಮಹೀಂದ್ರಾ & ಮಹೀಂದ್ರಾದ ಅನೀಶ್ ಶಾ ನಂ.6 ಮತ್ತು ಇನ್ಫೋಸಿಸ್‌ನ ಸಲೀಲ್ ಪರೇಖ್ ನಂ.16 ಸ್ಥಾನದಲ್ಲಿದ್ದಾರೆ. 2023 ರ ಶ್ರೇಯಾಂಕದಲ್ಲಿ ಅಂಬಾನಿ ಜಾಗತಿಕವಾಗಿ 2 ನೇ ಸ್ಥಾನದಲ್ಲಿದ್ದರು.
* ನೌಕರರು, ಹೂಡಿಕೆದಾರರು ಮತ್ತು ಸಮಾಜಕ್ಕೆ ಸಮತೋಲಿತವಾಗಿ ಉದ್ಯಮದ ಮೌಲ್ಯವನ್ನು ಸುಸ್ಥಿರ ಮಾದರಿಯಲ್ಲಿ ಹೆಚ್ಚಿಸುವ ಆಧಾರದ ಮೇಲೆ ಗಾರ್ಡಿಯನ್ ಷಿಪ್ ಇಂಡೆಕ್ಸ್ ಜಾಗತಿಕವಾಗಿ ಸಿಇಒಗಳನ್ನು ಗುರುತಿಸುತ್ತದೆ.
* ಈ ವರ್ಷ ಅವರು ಬ್ರಾಂಡ್ ಗಾರ್ಡಿಯನ್‌ಶಿಪ್ ಇಂಡೆಕ್ಸ್ 2024 ರಲ್ಲಿ 'ಡೈವರ್ಸಿಫೈಡ್' ಕಾಂಗ್ಲೋಮೆರೇಟ್‌ಗಳಲ್ಲಿ ನಂ.1 ಸ್ಥಾನ ಪಡೆದರು. ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ, ಗೂಗಲ್‌ನ ಸುಂದರ್ ಪಿಚೈ, ಆಪಲ್‌ನ ಟಿಮ್ ಕುಕ್ ಮತ್ತು ಟೆಸ್ಲಾದ ಎಲೋನ್ ಮಸ್ಕ್ ಅವರಂತಹ ಜಾಗತಿಕ ಮೇಜರ್‌ಗಳಿಗಿಂತ ಅಂಬಾನಿ ಮುಂದಿದ್ದಾರೆ.
* 2023 ರ ಪಟ್ಟಿಯಲ್ಲೂ ಅಂಬಾನಿ ಅವರು ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದ್ದರು. ಬ್ರಾದ ಫೈನಾನ್ಸ್ ಸಮೀಕ್ಷೆಯ ಅಂಬಾನಿ ಅವರಿಗೆ 80 .3 ಸ್ಕೋರ್ ನೀಡಿದೆ. ಅಗ್ರಸ್ಥಾನ ಪಡೆದ ಚೀನಾದ ಹುವಾತೆಂಗ್ ಮಾ ಅವರಿಗೆ 81 .6 ಸ್ಕೋರ್ ಲಭಿಸಿದೆ.
ಸೋಮವಾರ, 05 ಫೆಬ್ರುವರಿ 2024
10:28 ಪೂರ್ವಾಹ್ನ
Daily PDF
ಜಾಗತಿಕ ಬ್ರಾಂಡ್ ಗಾರ್ಡಿಯನ್ ಶಿಪ್ ಸೂಚ್ಯಂಕ : ಮುಕೇಶ್ ಅಂಬಾನಿಗೆ 2 ನೇ ಸ್ಥಾನ
Authored by:
Bhagya R K