* ಇಸ್ರೋದ ಚಂದ್ರಯಾನ-3 ನಂತರದಲ್ಲಿಯೇ ಉಡಾವಣೆಯಾದ ರಷ್ಯಾ ಕೈಗೊಂಡಿದ್ದ ಚಂದ್ರಯಾನ ನೌಕೆಯು ‘ಲೂನಾ –25’ ತಾಂತ್ರಿಕ ದೋಷದಿಂದ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಒಂದು ದಿನದ ಮೊದಲೇ ಪತನವಾಗಿದೆ.
* ‘ಲೂನಾ–25’ ನೌಕೆಯನ್ನು ಆಗಸ್ಟ್ 11ರಂದು ರಷ್ಯಾ ಚಂದ್ರನಲ್ಲಿ ಘನೀಕರಣಗೊಂಡಿರುವ ನೀರು ಮತ್ತು ಅಮೂಲ್ಯ ಅಂಶಗಳಿರುವ ಕುರಿತು ಅನ್ವೇಷಣೆ ನಡೆಸಲು ಉದ್ದೇಶದಿಂದ ಉಡಾವಣೆ ಮಾಡಿತ್ತು. ನೌಕೆಯು ಸೋಮವಾರ(ಆಗಸ್ಟ್ 21) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಮಯ ನಿಗದಿ ಮಾಡಲಾಗಿತ್ತು.
* ಶನಿವಾರ ಆಗಸ್ಟ್ 20 ರಂದು ಫ್ರೀ ಲ್ಯಾಂಡಿಂಗ್ ಕಕ್ಷೆಗೆ ನೌಕೆಯನ್ನು ತರುವ ಕೆಲಸ ನಡೆದಿದ್ದು, ಸುಮಾರು 11 ಗಂಟೆಯ ವೇಳೆ ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಯೋಜಿತ ಕಕ್ಷಗೆ ನೌಕೆಯು ಹೋಗಲು ವಿಫಲವಾಗಿದೆ’ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ‘ರೊಸ್ಕೋಸ್ಮಾಸ್’ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರಷ್ಯಾದ ಬಾಹ್ಯಾಕಾಶ ನೌಕೆ 'ಲೂನಾ 25' ಪತನ
Published by Yallamma G
21 ಆಗಸ್ಟ್ 2023