* 2023 ಡಿಸೆಂಬರ್ 2ರಂದು ಆರಂಭವಾಗುವ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯು.ಪಿ ಯೋಧಾಸ್ ತಂಡವನ್ನು ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿರುವ ಪ್ರದೀಪ್ ನರ್ವಾಲ್ ಅವರು ಮುನ್ನಡೆಸಲಿದ್ದಾರೆ ಎಂದು ತಂಡದ ಫ್ರಾಂಚೈಸಿ ಭಾನುವಾರ(ನ.26) ತಿಳಿಸಿದೆ.
* ಪಿಕೆಎಲ್‌ನ ರೇಡಿಂಗ್‌ನಲ್ಲಿ ಅತ್ಯಧಿಕ ಪಾಯಿಂಟ್ಸ್‌ಗಳ (1,500ಕ್ಕೂ ಹೆಚ್ಚು) ದಾಖಲೆ ಹೊಂದಿರುವ ಪ್ರದೀಪ್ ನರ್ವಾಲ್ ಅವರು ಪಟ್ನಾ ತಂಡ ಸತತ ಮೂರು ಸಲ (2016, 2017 ಮತ್ತು 2018) ಚಾಂಪಿಯನ್ ಆದಾಗ ನರ್ವಾಲ್ ಅವರು ನಾಯಕರಾಗಿದ್ದರು.
* ಯು.ಪಿ ಯೋಧಾಸ್ ತಂಡವನ್ನು ನಾಯಕನಾಗಿ ಮಾಡಿ 'ನನ್ನ ಹೆಗಲ ಮೇಲೆ ದೊಡ್ಡ ಹೊಣೆ ವಹಿಸಿದ್ದಾರೆ. ಇದನ್ನು ಸಾಧಿಸಲು ಸರ್ವ ಪ್ರಯತ್ನ ಮಾಡುತ್ತೇನೆ' ಎಂದು ನರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
* ಯೋಧಾಸ್ ತಂಡ ಡಿ.2ರಂದು ಆರಂಭವಾಗುವ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಎದುರಿಸಲಿದೆ. 2017ರಲ್ಲಿ ಪಿಕೆಎಲ್‌ನಲ್ಲಿ ಮೊದಲ ಬಾರಿ ಆಡಿರುವ ಯುಪಿ, ಯೋಧಾಸ್ ಪ್ಲೇಆಫ್ ಹಂತದಿಂದ ಮೇಲಕ್ಕೇರಿಲ್ಲ.
ಸೋಮವಾರ, 27 ನವೆಂಬರ್ 2023
11:26 ಪೂರ್ವಾಹ್ನ
Daily PDF
ಪ್ರೊ ಕಬಡ್ಡಿ ಲೀಗ್ : ಯು.ಪಿ.ಯೋಧಸ್ ತಂಡಕ್ಕೆ ನರ್ವಾಲ್ ನಾಯಕ
Authored by:
Yallamma G