* ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಳೆಯ ವಿದ್ಯಾರ್ಥಿಗಳಾದ ರಸ್ತೋಗಿ ಮತ್ತು ಐಶ್ವರ್ಯ ಭಟ್ನಾಗರ್ ಅವರು ಸ್ಥಾಪಿಸಿರುವ ಗ್ರೀನ್‌ಡೇ ಕಂಪನಿಯ 'ಬೆಟರ್ ನ್ಯೂಟ್ರೇಷನ್'ನ ಬ್ರಾಂಡ್ ನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
* ಜೈವಿಕ ಆಹಾರಗಳ ಮೂಲಕ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಕಡಿಮೆ ಮಾಡುವ ಗುರಿಯನ್ನು ಗ್ರೀನ್‌ಡೇ ಕಂಪನಿಯು ಹೊಂದಿದೆ. ಗ್ರೀನ್‌ಡೇ ಜೊತೆಗಿನ ಸಿಂಧು ಅವರ ಪಾಲುದಾರಿಕೆಯು ಗ್ರಾಹಕರ ಆರೋಗ್ಯ ಮತ್ತು ರೈತರ ಏಳಿಗೆ ಎರಡನ್ನೂ ಗುರಿಯಾಗಿಟ್ಟುಕೊಂಡು ಬೆಳೆಗಳ ಪೌಷ್ಟಿಕಾಂಶದವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ತಿಳಿಸಿದೆ.
* 'ನಮ್ಮ ದೇಶದಲ್ಲಿ ಪೌಷ್ಟಿಕಾಂಶದ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಬ್ಯಾಂಡ್‌ನೊಂದಿಗೆ ಸಹಕರಿಸುವೆ' ಎಂದು ಸಿಂಧು ಹೇಳಿಕೆಯಲ್ಲಿ ತಿಳಿಸಿದ್ದಾರೆ.
* ಗ್ರೀನ್‌ಡೇ 'ಕಿಸಾನ್ ಕಿ ದುಕಾನ್ ಬ್ರಾಂಡ್‌ನ ಅಡಿಯಲ್ಲಿ ದೇಶಾದ್ಯಂತ ಸುಮಾರು 75 ಕೃಷಿ ಉತ್ಪನ್ನ ಮಳಿಗೆ, ಖರೀದಿ ಕೇಂದ್ರ ಹೊಂದಿದೆ. ಪೌಷ್ಟಿಕಾಂಶಯುಕ್ತ ಗೋಧಿ ಹಿಟ್ಟು, ಅಕ್ಕಿ, ಜೋಳ, ರಾಗಿ ಮತ್ತು ಮೆಕ್ಕೆಜೋಳ ಮಾರಾಟ ಮಾಡುತ್ತದೆ.
ಮಂಗಳವಾರ, 04 ಜೂನ್ 2024
10:41 ಪೂರ್ವಾಹ್ನ
Daily PDF
ಪಿ ವಿ ಸಿಂಧು ಅವರು ಗ್ರೀನ್ ಡೇ ಕಂಪನಿಯ 'ಬೆಟರ್ ನ್ಯೂಟ್ರಿಷನ್' ನ ರಾಯಭಾರಿಯಾಗಿ ನೇಮಕ
Authored by:
Yallamma G