* ಟೀಮ್ ಇಂಡಿಯಾ ಆಟಗಾರ ಕೇದಾರ್ ಜಾಧವ್ (Kedar Jadhav) ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 2014 ರಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ ಜಾಧವ್ 2020 ರಲ್ಲಿ ಕೊನೆಯ ಬಾರಿ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. 
* “ನನ್ನ ವೃತ್ತೀಜಿವನದುದ್ದಕ್ಕೂ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಎಲ್ಲ ಮಾದರಿಯ ಕ್ರಿಕೆಟ್​ಗೆ ನನ್ನ ನಿವೃತ್ತಿ ಎಂದು ಪರಿಗಣಿಸಿ' ಎಂದು ಕೇದಾರ್​ ಬರೆದಿದ್ದಾರೆ. 2020ರ ಆಗಸ್ಟ್​ 15ರಂದು ಧೋನಿ ಕೂಡ ಇದೇ ರೀತಿಯಲ್ಲಿ, “19.29 ಗಂಟೆಯಿಂದ (ರಾತ್ರಿ 7.29) ನನ್ನನ್ನು ನಿವೃತ್ತಿ ಎಂದು ಪರಿಗಣಿಸಿ' ಎಂದು ವಿದಾಯ ಸಾರಿದ್ದರು.
* ಟೀಮ್ ಇಂಡಿಯಾ ಪರ 73 ಏಕದಿನ ಪಂದ್ಯಗಳಲ್ಲಿ 52 ಇನಿಂಗ್ಸ್ ಆಡಿ ಬಲಗೈ ಬ್ಯಾಟರ್ 1389 ರನ್​ ಗಳಿಸಿದ್ದಾರೆ. ಈ ವೇಳೆ 2 ಶತಕ ಹಾಗೂ 6 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೇ 9 ಟಿ20 ಪಂದ್ಯಗಳಿಂದ 1 ಅರ್ಧಶತಕದೊಂದಿಗೆ 122 ರನ್ ಕಲೆಹಾಕಿದ್ದಾರೆ.
*  2009 ರಲ್ಲಿ ಐಪಿಎಲ್ ನಲ್ಲಿ ಕೆರಿಯರ್ ಆರಂಭಿಸಿದ್ದ ಕೇದಾರ್ ಜಾಧವ್ ಆರ್​ಸಿಬಿ ಪರ ಚೊಚ್ಚಲ ಪಂದ್ಯವಾಡಿದ್ದರು. ಇದಾದ ಬಳಿಕ ಡೆಲ್ಲಿ ಡೇರ್​ ಡೆವಿಲ್ಸ್​ ತಂಡದ ಭಾಗವಾಗಿದ್ದರು. ಇನ್ನು 2011 ರಲ್ಲಿ ಕೊಚ್ಚಿ ಟಸ್ಕರ್ಸ್​ ತಂಡದ ಕಣಕ್ಕಿಳಿದಿದ್ದರು. ಆ ಬಳಿಕ ಮತ್ತೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಮೂರು ಸೀಸನ್ ಆಡಿದ್ದರು.
* ನ್ಯೂಝಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಬಳಿಕ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ.