* ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಪಠ್ಯ ಪರಿಷ್ಕರಣಿಯ ಹೊಸ ಸಮಿತಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಮತ್ತು ಸಂಗೀತಗಾರ ಶಂಕರ್ ಮಹಾದೇವನ್ ಸಹಿತ 18 ಸದಸ್ಯರು ಸೇರಿ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ (ಎನ್‌ಎಸ್‌ಟಿಸಿ) ಎಂಬ ನೂತನ ಸಮಿತಿಯು 3ರಿಂದ 12ನೇ ತರಗತಿಯ ವರೆಗಿನ ಪಠ್ಯಗಳನ್ನು ರೂಪಿಸಲಿದೆ.
* ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಸಮಿತಿಯನ್ನು ರಚಿಸಲಾಗಿದೆ.
* ಪಠ್ಯಪುಸ್ತಕಗಳು ಮತ್ತು ಇತರ ಬೋಧನಾ ಕಲಿಕಾ ಸಾಮಗ್ರಿಗಳ ಬಗ್ಗೆ ಈ ಸಮಿತಿ ತೀರ್ಮಾನ ಕೈಗೊಳ್ಳಲಿದ್ದು 18 ಸದಸ್ಯರ ಸಮಿತಿಗೆ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ (ಎನ್‌ಐಇಪಿಎ) ಕುಲಾಧಿಪತಿ ಎಂ.ಸಿ. ಪಂತ್ ಮುಖ್ಯಸ್ಥರಾಗಿರುತ್ತಾರೆ.
* ತಜ್ಞರು ನೀಡಿದ ಶಿಫಾರಸುಗಳ ಆಧಾರದ ಕೆಲವು ಪಠ್ಯಭಾಗಗಳನ್ನು ತೆಗೆದುಹಾಕಲಾಗಿದೆ ಎಂದು NCERT ಹೇಳಿದೆ.
NCERT ಪಠ್ಯಪುಸ್ತಕ ಪರಿಷ್ಕರಿಸುವ ನೂತನ ಸಮಿತಿಯಲ್ಲಿ ಸುಧಾ ಮೂರ್ತಿ, ಸಂಗೀತಗಾರ ಶಂಕರ್ ಮಹಾದೇವನ್
Published by Bhagya R K
14 ಆಗಸ್ಟ್ 2023