* ರೈಲ್ವೆ ಸಚಿವಾಲಯವು ದೇಶದಾದ್ಯಂತದ ರೈಲು ನಿಲ್ದಾಣಗಳಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುತ್ತದೆ. 
* ಪ್ರಾಯೋಗಿಕ ಯೋಜನೆಗಾಗಿ ಐವತ್ತು ನಿಲ್ದಾಣಗಳ ಪಟ್ಟಿಯನ್ನು ಸಚಿವಾಲಯ ಗುರುತಿಸಿದೆ
* ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ (PMBJP) ಯೋಜನೆ ಆರಂಭಿಸಿದೆ.
* 2015ರ ಸೆಪ್ಟೆಂಬರ್‌ನಲ್ಲಿ, ಜನೌಷಧ ಯೋಜನೆಯನ್ನು ಪ್ರಧಾನ ಮಂತ್ರಿ ಜನೌಷಧಿ ಯೋಜನೆ (PMJAY) ಎಂದು ಮರುಪ್ರಾರಂಭಿಸಲಾಯಿತು.
* 2016ರ ನವೆಂಬರ್‌ನಲ್ಲಿ, ಈ ಯೋಜನೆಯನ್ನು ಉತ್ತೇಜಿಸಲು ಇದನ್ನು “ಪ್ರಧಾನ ಮಂತ್ರಿ ಭಾರತೀಯ ಜನೌಷಧ ಪರಿಯೋಜನಾ” ಎಂದು ಮರುನಾಮಕರಣ ಮಾಡಲಾಯಿತು.