* ರಾಷ್ಟ್ರಪತಿ ದೌಪದಿ ಮುರ್ಮು ಅವರು 2024 ಜನವರಿ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ವಿಧ್ಯುಕ್ತ ಸಮಾರಂಭದಲ್ಲಿ ಅಸಾಧಾರಣ ಸಾಧನೆಗೈದ ಕ್ರೀಡಾಪಟುಗಳಿಗೆ ಪ್ರತಿಷ್ಟಿತ 'ಖೇಲ್ ರತ್ನ' ಮತ್ತು 'ಅರ್ಜುನ' ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
* ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
* ಖೇಲ್ ರತ್ನ ಪ್ರಶಸ್ತಿಯು ತಲಾ 25 ಲಕ್ಷ ನಗದು ಬಹುಮಾನವನ್ನು ಒಂಳಗೊಂಡಿದೆ ಹಾಗೂ ಅರ್ಜುನ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿಯು ತಲಾ 15 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.
* ಮೊಹಮದ್ದ ಶಮಿ ಅವರು 2023ನೇ ಶಾಲಿನ ಅರ್ಜುನ್ ಪ್ರಶಸ್ತಿ ಪಡೆದ 58ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
* ವಿವಿಧ ಕ್ರೀಡಾ ವಿಭಾಗಗಳಲ್ಲಿ ಕ್ರೀಡಾಪಟುಗಳ ಗಮನಾರ್ಹ ಸಾಧನೆಗಳು ಮತ್ತು ಸಮರ್ಪಣೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. ಈ
ಪ್ರಶಸ್ತಿಗಳನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವವೆಂದು ಪರಿಗಣಿಸಲಾಗಿದೆ, ಇವು ಕ್ರೀಡೆಯ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ ಮತ್ತು ಶ್ರೇಷ್ಠತೆಗಾಗಿ ಶ್ರಮಿಸಲು ಯುವ ಪ್ರತಿಭೆಗಳನ್ನು ಪ್ರೇರೇಪಿಸುತ್ತದೆ.
* 2023ರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ:
- ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್
* ಅರ್ಜುನ ಪ್ರಶಸ್ತಿ :
- ಓಜಸ್ ಪ್ರವೀಣ್ ದಿಯೋಟಲೆ - ಆರ್ಚರಿ
- ಅದಿತಿ ಗೋಪಿಚಂದ್ ಸ್ಮಾಮಿ - ಆರ್ಚರಿ
- ಮುರಳಿ ಶ್ರೀಶಂಕರ್ - ಅಥ್ಲೆಟಿಕ್ಸ್
- ಪಾರುಲ್ ಚೌಧರಿ - ಅಥ್ಲೆಟಿಕ್ಸ್
- ಮೊಹಮ್ಮದ್ ಹುಸಾಮುದ್ದೀನ್ - ಬಾಕ್ಸಿಂಗ್
- ಆರ್.ವೈಶಾಲಿ - ಚೆಸ್
- ಮೊಹಮ್ಮದ್ ಶಮಿ - ಕ್ರಿಕೆಟ್
- ಅನುಷ್ ಅಗರವಾಲ್ - ಕುದುರೆ ಸವಾರಿ
- ದಿವ್ಯಾಕೃತಿ ಸಿಂಗ್ - ಕುದುರೆ ಸವಾರಿ
- ದೀಕ್ಷಾ ದಾಗರ್ - ಗಾಲ್
- ಕ್ರಿಶನ್ ಬಹದ್ದೂರ್ ಪರಾಕ್ - ಹಾಕಿ
- ಸುಶೀಲಾ ಚಾನು - ಹಾಕಿ
- ಪವನ್ ಕುಮಾರ್ - ಕಬಡ್ಡಿ
- ರಿತು ನೇಗಿ - ಕಬಡ್ಡಿ
- ನಸೀನ್ - ಖೋ-ಖೋ
- ಪಿಂಕಿ - ಲಾನ್ ಬೌ
- ಐಶ್ವರಿ ಪ್ರತಾಪ್ ಸಿಂಗ್ ತೋಮರ್ - ಶೂಟಿಂಗ್
- ಇಶಾ ಸಿಂಗ್ - ಶೂಟಿಂಗ್
- ಹರಿಂದರ್ ಪಾಲ್ ಸಿಂಗ್ ಸಂಧು - ಸ್ಮಾನ್
- ಐಹಿಕಾ ಮುಖರ್ಜಿ - ಟೇಬಲ್ ಟೆನಿಸ್
- ಸುನಿಲ್ ಕುಮಾರ್ - ಕುಸ್ತಿ
- ಅಂತಿಮ್ - ಕುಸ್ತಿ
- ನವೋರಮ್ ರೋಶಿಬಿನಾ ದೇವಿ - ವುಶು
- ಶೀತಲ್ ದೇವಿ - ಪ್ಯಾರಾ ಆರ್ಚರಿ
- ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ - ಅಂದ ಕ್ರಿಕೆಟ್
- ಪ್ರಾಚಿ ಯಾದವ್ - ಪ್ಯಾರಾ ಕ್ಯಾನೋಯಿಂಗ್
* ದ್ರೋಣಾಚಾರ್ಯ ಪ್ರಶಸ್ತಿ:
- ಲಲಿತ್ ಕುಮಾರ್ - ಕುಸ್ತಿ
- ಆರ್‌ಬಿ ರಮೇಶ್ - ಚೆಸ್
- ಮಹಾವೀರ್ ಪ್ರಸಾದ್ ಸೈನಿ - ಪ್ಯಾರಾ ಅಥ್ಲೆಟ್
- ಶಿವೇಂದ್ರ ಸಿಂಗ್ - ಹಾಕಿ
- ಗಣೇಶ ಪ್ರಭಾಕರ್ - ಮಲ್ಲಗಂಬ
* ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ಶ್ರೇಷ್ಠ ಸಾಧನೆ):
- ಜರತ್ ಸಿಂಗ್ ಗ್ರೆವಾಲ್ - ಗಾಲ್
- ಭಾಸ್ಮರನ್ ಇ. - ಕಬಡ್ಡಿ
- ಜಯಂತ ಕುಮಾರ್ ಪುಶಿಲಾಲ್ - ಟೇಬಲ್ ಟೆನಿಸ್
* ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ:
- ಮಂಜುಷಾ ಕನ್ಸರ್ - ಬ್ಯಾಡ್ಮಿಂಟನ್
- ವಿತ್ ಕುಮಾರ್ ಶರ್ಮಾ - ಹಾಕಿ
- ಕವಿತಾ ಸೆಲ್ವರಾಜ್ - ಕಬಡ್ಡಿ
ಬುಧವಾರ, 10 ಜನವರಿ 2024
10:51 ಪೂರ್ವಾಹ್ನ
Daily PDF
ಮೊಹಮ್ಮದ್ ಶಮಿ ಸೇರಿದಂತೆ 26 ಆಟಗಾರರಿಗೆ ಅರ್ಜುನ ಪ್ರಶಸ್ತಿ ಪ್ರದಾನ
Authored by:
Yallamma G