* ಫ್ರಾನ್ಸ್ ನ ನೂತನ ಪ್ರಧಾನಿಯಾಗಿ ಗೇಬ್ರಿಯಲ್ ಅಟಲ್ ಅವರನ್ನು ನೇಮಕ ಮಾಡಲಾಗಿದೆ. 34 ವರ್ಷದ ಗೇಬ್ರಿಯಲ್ ಅಟಲ್ ಕಿರಿಯ ಹಾಗೂ ಮೊದಲ ಬಾರಿಗೆ ಸಲಿಂಗಕಾಮಿಯೊಬ್ಬರು ದೇಶದ ಪ್ರಧಾನಿಯಾಗಿದ್ದಾರೆ. ಎಲಿಜಬೆತ್ ಬೋರ್ನ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಇವರ ಸ್ಥಾನಕ್ಕೆ ಗೇಬ್ರಿಯಲ್ ಅಟಲ್ ಅವರನ್ನು ನೇಮಕ ಮಾಡಲಾಗಿದೆ.
* ಹತ್ತು ವರ್ಷಗಳ ಹಿಂದೆ ಅವರು ಫ್ರೆಂಚ್ ಆರೋಗ್ಯ ಸಚಿವಾಲಯದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಅವರು ಸೋಶಿಯಲಿಸ್ಟ್ ಪಾರ್ಟಿಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಗೇಬ್ರಿಯಲ್ ಅಟಲ್ ಅವರು ಪ್ರಧಾನಿಯಾಗುವ ಮೊದಲು ಮ್ಯಾಕ್ರನ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿಕದ ಅನುಭವ ಹೊಂದಿದ್ದಾರೆ.
* ವಿದೇಶಿಗರನ್ನು ಗಡೀಪಾರು ಮಾಡಲು ಸರ್ಕಾರಕ್ಕೆ ಬಲ ನೀಡುವ ಇತ್ತೀಚಿನ ವಲಸೆ ನೀತಿ ಕುರಿತಾದ ರಾಜಕೀಯ ಕಿತ್ತಾಟದ ಹಿನ್ನೆಲೆಯಲ್ಲಿ ಎಲಿಜಬೆತ್ ಬಾರ್ನ್ ಪ್ರಧಾನಿ ಸ್ನಾನಕ್ಕೆ ರಾಜೀನಾಮೆ ನೀಡಿದ್ದಾರೆ.
* ಸೋಶಿಯಲಿಸ್ಟ್ ಪಕ್ಷದ ಮಾಜಿ ಸದಸ್ಯರಾದ ಅತ್ತಲ್, 2016ರಲ್ಲಿ ಹೊಸದಾಗಿ ಸ್ಥಾಪನೆಯಾದ ಮ್ಯಾಕ್ರನ್ ಪಕ್ಷ ಸೇರಿದ್ದರು. 2020-2023ರವರೆಗೆ ಸರ್ಕಾರದ ವಕ್ತಾರನಾಗಿ ಕೆಲಸ ಮಾಡಿದ ಗೇಬ್ರಿಯಲ್ ಅವರು, ಜನರಿಗೆ ಪರಿಚಿತವಾದರು. ಕಳೆದ ವರ್ಷದ ಜುಲೈನಲ್ಲಿ ಅವರನ್ನು ಫ್ರೆಂಚ್ ಸರ್ಕಾರದ ಅತ್ಯಂತ ಪ್ರತಿಷ್ಠಿತ ಹುದ್ದೆಯಾದ ಶಿಕ್ಷಣ ಸಚಿವರಾಗಿ ನೇಮ ಮಾಡಲಾಗಿತ್ತು.
ಬುಧವಾರ, 10 ಜನವರಿ 2024
12:56 ಅಪರಾಹ್ನ
Daily PDF
ಫ್ರಾನ್ಸ್ ನ ನೂತನ ಪ್ರಧಾನಿಯಾಗಿ ಗೇಬ್ರಿಯಲ್ ಅಟ್ಟಲ್ ಆಯ್ಕೆ
Authored by:
Yallamma G