* ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಖಾಸಗಿ ಕಂಪನಿಯ ಜೊತೆ ಸೇರಿ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ 7.62 x 51 ಎಂಎಂ ಕ್ಯಾಲಿಬರ್‌ನ ಅತ್ಯಾಧುನಿಕ ಅಸಾಲ್ಟ್ ರೈಫಲ್ 'ಉಗ್ರಂ'ನ ಅನ್ನು ಜನವರಿ 08 ರಂದು (ಸೋಮವಾರ) ಅನಾವರಣಗೊಳಿಸಲಾಯಿತು.
* ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಪುಣೆಯಲ್ಲಿರುವ ಪ್ರಯೋಗಾಲಯದಲ್ಲಿ ಈ ಅಸಾಲ್ಟ್ ರೈಫಲ್ ಅನ್ನು ವಿನ್ಯಾಸಗೊಳಿಸಲಾಗಿದೆ.
* ಉಗ್ರಂ ರೈಫಲ್‌ನ ಮೊದಲ ಕಾರ್ಯಾಚರಣೆಯ ಮೂಲಮಾದರಿಯನ್ನು ಪುಣೆಯ ಡಿಆರ್‌ಡಿಒದ ಆರ್ಮಮೆಂಟ್ ಮತ್ತು ಯುದ್ಧ ಎಂಜಿನಿಯರಿಂಗ್ ವ್ಯವಸ್ಥೆಗಳ ಮಹಾನಿರ್ದೇಶಕ ಡಾ.ಶೈಲೇಂದ್ರ ವಿ ಗಾಡೆ ಅವರು ಅನಾವರಣಗೊಳಿಸಿದರು.
* ಉಗ್ರಂ ರೈಫಲ್ ಮೂಲಕ 7.62 ಎಂಎಂ ಗುಂಡುಗಳನ್ನು ಹಾರಿಸಬಹುದಾಗಿದ್ದು, ಪ್ಯಾರಾ ಮಿಲಿಟರಿಯಲ್ಲಿ ಬಳಸುತ್ತಿರುವ ಇನ್ಸಾಸ್ (INSAS) ಮಾದರಿಯ ರೈಫಲ್‌ಗಳ ಮೂಲಕ 5.52 ಎಂಎಂ ಗುಂಡುಗಳನ್ನು ಮಾತ್ರ ಹಾರಿಸಬಹುದಾಗಿದೆ.
* ಉಗ್ರಂ ರೈಫಲ್ 500 ಮೀಟರ್‌ಗಳ ಪರಿಣಾಮಕಾರಿ ವ್ಯಾಪ್ತಿಯನ್ನು ಹೊಂದಿದೆ ಮತ್ತು ನಾಲ್ಕು ಕಿಲೋಗ್ರಾಂಗಳಿಗಿಂತ ಕಡಿಮೆ ತೂಕವನ್ನು ಹೊಂದಿದೆ ಮತ್ತು ಹೈದರಾಬಾದ್ ಮೂಲದ ದ್ವಿಪಾ ಆರ್ಮರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ DRDO ದ ಪುಣೆ ಮೂಲದ ಸೌಲಭ್ಯ ಆರ್ಮಮೆಂಟ್ ರಿಸರ್ಚ್ ಮತ್ತು ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ಅಭಿವೃದ್ಧಿಪಡಿಸಿದೆ.
ಬುಧವಾರ, 10 ಜನವರಿ 2024
11:20 ಪೂರ್ವಾಹ್ನ
Daily PDF
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಿಂದ 'ಉಗ್ರಂ' ರೈಫಲ್ ಅನಾವರಣ
Authored by:
Bhagya R K