➤ ಭಾರತದಲ್ಲಿ ಪ್ರಾದೇಶಿಕ ವಿಮಾನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಮತ್ತು 'ಸಾಮಾನ್ಯ ಪ್ರಜೆಯೂ ವಿಮಾನ ಪ್ರಯಾಣ ಮಾಡುವಂತೆ' ಮಾಡುವ ಉದ್ದೇಶದಿಂದ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಕರ್ನಾಟಕ ಸೇರಿದಂತೆ ದೇಶದ 22 ರಾಜ್ಯಗಳೊಂದಿಗೆ ತಿಳುವಳಿಕಾ ಪತ್ರಕ್ಕೆ (MoU) ಸಹಿ ಹಾಕಿದೆ.
➤ ಈ ಹೊಸ ಒಪ್ಪಂದದ ಮೂಲಕ ಉಡಾನ್ (UDAN - Ude Desh Ka Aam Nagrik) ಯೋಜನೆಯ ಮುಂದಿನ ಹಂತಕ್ಕೆ ಚಾಲನೆ ನೀಡಲಾಗಿದ್ದು, 'ಚಾಲೆಂಜ್ ಮೋಡ್' (Challenge Mode) ಮತ್ತು ಹೊಸ ಮಾರ್ಗಗಳ ಹರಾಜು ಪ್ರಕ್ರಿಯೆಯನ್ನು (Routes Bidding Round) ಪ್ರಾರಂಭಿಸಲಾಗಿದೆ.
➤ ಉಡಾನ್ ಯೋಜನೆಯ ಮುಖ್ಯಾಂಶಗಳು:
- ಒಟ್ಟು ಬಜೆಟ್ ವೆಚ್ಚ: ಮುಂಬರುವ 10 ವರ್ಷಗಳ ಅವಧಿಗೆ (2026-27 ರಿಂದ 2035-36) ₹28,840 ಕೋಟಿ ಅನುದಾನವನ್ನು ಕೇಂದ್ರ ಸಂಪುಟ ಅನುಮೋದಿಸಿದೆ.
- ಗುರಿ: ಮುಂದಿನ ಒಂದು ದಶಕದಲ್ಲಿ 120 ಹೊಸ ತಾಣಗಳಿಗೆ ವಿಮಾನ ಸಂಪರ್ಕ ನೀಡುವುದು ಹಾಗೂ 4 ಕೋಟಿ ಪ್ರಯಾಣಿಕರಿಗೆ ವಿಮಾನ ಪ್ರಯಾಣ ಸೌಲಭ್ಯ ಕಲ್ಪಿಸುವುದು.
- ವಿಮಾನ ನಿಲ್ದಾಣ ಮತ್ತು ಹೆಲಿಪ್ಯಾಡ್ ಅಭಿವೃದ್ಧಿ:
* ಬಳಕೆಯಾಗದ 100 ಹೊಸ ವಿಮಾನ ನಿಲ್ದಾಣ/ಏರ್‌ಸ್ಟ್ರಿಪ್‌ಗಳ ಅಭಿವೃದ್ಧಿ (ವೆಚ್ಚ: ₹12,159 ಕೋಟಿ).
* ಈಶಾನ್ಯ ರಾಜ್ಯಗಳು, ಗುಡ್ಡಗಾಡು ಹಾಗೂ ದ್ವೀಪ ಪ್ರದೇಶಗಳಲ್ಲಿ 200 ಆಧುನಿಕ ಹೆಲಿಪ್ಯಾಡ್‌ಗಳ ನಿರ್ಮಾಣ (ವೆಚ್ಚ: ₹3,661 ಕೋಟಿ).
* ವಿಮಾನಯಾನ ಸಂಸ್ಥೆಗಳಿಗೆ 'ವಯಾಬಿಲಿಟಿ ಗ್ಯಾಪ್ ಫಂಡಿಂಗ್' (VGF) ಬೆಂಬಲ (ವೆಚ್ಚ: ₹10,043 ಕೋಟಿ).
➤ ಭಾಗವಹಿಸಿದ 22 ರಾಜ್ಯಗಳು: ಆಂಧ್ರಪ್ರದೇಶ, ಬಿಹಾರ, ಅಸ್ಸಾಂ, ಗುಜರಾತ್, ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ಕರ್ನಾಟಕ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ಉತ್ತರ ಪ್ರದೇಶ, ತೆಲಂಗಾಣ, ತ್ರಿಪುರಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.