➤ ಸೆಪ್ಟೆಂಬರ್ 13, 2026 ರಿಂದ ಜಾರಿಗೆ ಬರುವಂತೆ, 65 ನೇ ವಯಸ್ಸಿನಲ್ಲಿ ನಿವೃತ್ತರಾದ ರವಿ ಮಿತ್ತಲ್ ಅವರ ಸ್ಥಾನಕ್ಕೆ IBBI ಯ ಪೂರ್ಣಾವಧಿ ಸದಸ್ಯರಾಗಿರುವ ಜಯಂತಿ ಪ್ರಸಾದ್ ಅವರು ನವೆಂಬರ್ 20, 2026 ರವರೆಗೆ ಅಥವಾ ಪೂರ್ಣಾವಧಿ ಅಧ್ಯಕ್ಷರ ನೇಮಕವಾಗುವವರೆಗೆ ಸಂಸ್ಥೆಯ ಹೆಚ್ಚುವರಿ ಅಧ್ಯಕ್ಷರಾಗಿ (Additional Charge as Chairperson) ಅಧಿಕಾರ ವಹಿಸಿಕೊಂಡಿದ್ದಾರೆ.
➤ ಜಯಂತಿ ಪ್ರಸಾದ್ ಅವರ ವೃತ್ತಿಜೀವನ ಪರಿಚಯ:
- ಜಯಂತಿ ಪ್ರಸಾದ್ ಅವರು 1986 ರ ಬ್ಯಾಚ್‌ನ 'ಇಂಡಿಯನ್ ಆಡಿಟ್ ಆಂಡ್ ಅಕೌಂಟ್ಸ್ ಸರ್ವಿಸ್' (IA&AS) ಅಧಿಕಾರಿಯಾಗಿದ್ದಾರೆ.
- ಇವರು ಜುಲೈ 5, 2022 ರಂದು IBBI ಯ ಪೂರ್ಣಾವಧಿ ಸದಸ್ಯರಾಗಿ (Whole-Time Member) ಅಧಿಕಾರ ವಹಿಸಿಕೊಂಡಿದ್ದರು.
- ಈಗಿನ ಹೆಚ್ಚುವರಿ ಹೊಣೆಗಾರಿಕೆಯ ಜೊತೆಗೆ ತಮ್ಮ ಹಳೆಯ ಪೂರ್ಣಾವಧಿ ಸದಸ್ಯರ ಹುದ್ದೆಯನ್ನೂ ನಿರ್ವಹಿಸಲಿದ್ದಾರೆ.
➤ IBBI (Insolvency and Bankruptcy Board of India) ಎಂಬುದು ಭಾರತ ಸರ್ಕಾರದ ಒಂದು ಶಾಸನಬದ್ಧ ನಿಯಂತ್ರಣ ಸಂಸ್ಥೆಯಾಗಿದೆ.
- ಸ್ಥಾಪನೆಯಾದ ಕಾಯ್ದೆ: Insolvency and Bankruptcy Code (IBC), 2016
- ಸ್ಥಾಪನೆಯಾದ ವರ್ಷ: ಅಕ್ಟೋಬರ್ 1, 2016
- ಮುಖ್ಯ ಕಚೇರಿ: ನವದೆಹಲಿ
- ಸಚಿವಾಲಯ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (Ministry of Corporate Affairs)
- ಪ್ರಮುಖ ಕಾರ್ಯಗಳು: ಭಾರತದಲ್ಲಿ ದಿವಾಳಿತನ ಪರಿಹಾರ ಪ್ರಕ್ರಿಯೆ, Insolvency Professionals, ಮತ್ತು Information Utilities ಗಳನ್ನು ನಿಯಂತ್ರಿಸುವುದು.
IBBI ಹೆಚ್ಚುವರಿ ಅಧ್ಯಕ್ಷರಾಗಿ ಜಯಂತಿ ಪ್ರಸಾದ್ ಅಧಿಕಾರ ಸ್ವೀಕಾರ
Published by Yallamma G
23 ಸೆಪ್ಟೆಂಬರ್ 2026