➤ ಆಗಸ್ಟ್ 31, 2026 ರಂದು ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ (Lionel Messi) ಅಂತರರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳಿಂದ ತಮ್ಮ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ 20 ವರ್ಷಗಳ ಸುದೀರ್ಘ ಹಾಗೂ ಐತಿಹಾಸಿಕ ಅಂತರರಾಷ್ಟ್ರೀಯ ಫುಟ್‌ಬಾಲ್ ಪಯಣಕ್ಕೆ ತೆರೆ ಬಿದ್ದಿದೆ.
- ಅಂತರರಾಷ್ಟ್ರೀಯ ಪಂದ್ಯಗಳು: 207 ಪಂದ್ಯಗಳು
- ಗಳಿಸಿದ ಗೋಲುಗಳು: 125 ಗೋಲುಗಳು
- ಮೊದಲ ಪಂದ್ಯ (Debut): 2005 ರಲ್ಲಿ ಅರ್ಜೆಂಟೀನಾ ಹಿರಿಯರ ತಂಡಕ್ಕೆ ಪಾದಾರ್ಪಣೆ
- ಸಾಧನೆ: ಅರ್ಜೆಂಟೀನಾ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ ಮತ್ತು ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರ.
➤ ಲಿಯೋನೆಲ್ ಮೆಸ್ಸಿ ಅವರ ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳು: ಮೆಸ್ಸಿ ನಾಯಕತ್ವ ಮತ್ತು ಉಪಸ್ಥಿತಿಯಲ್ಲಿ ಅರ್ಜೆಂಟೀನಾ ತಂಡವು ಹಲವು ಪ್ರಮುಖ ಟ್ರೋಫಿಗಳನ್ನು ಜಯಿಸಿದೆ:
- ಫಿಫಾ ವಿಶ್ವಕಪ್ (FIFA World Cup 2022): ಖತಾರ್‌ನಲ್ಲಿ ನಡೆದ 2022ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾವನ್ನು ಚಾಂಪಿಯನ್ ಮಾಡಿದರು (ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಜಯ).
- ಕೋಪಾ ಅಮೆರಿಕ (Copa América): 2021 ಮತ್ತು 2024ರಲ್ಲಿ ಎರಡು ಬಾರಿ ಕೋಪಾ ಅಮೆರಿಕ ಟ್ರೋಫಿ ಜಯಿಸಿದ್ದಾರೆ.
- ಫಿನಾಲಿಸಿಮಾ (Finalissima 2022): ಯುರೋಪ್ ಮತ್ತು ದಕ್ಷಿಣ ಅಮೆರಿಕ ಚಾಂಪಿಯನ್ನರ ನಡುವಿನ ಪಂದ್ಯದಲ್ಲಿ ಜಯ.
- ಒಲಿಂಪಿಕ್ ಚಿನ್ನದ ಪದಕ (Olympic Gold 2008): 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅರ್ಜೆಂಟೀನಾ ಪರ ಚಿನ್ನದ ಪದಕ.
➤ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರರು (ಪುರುಷರ ವಿಭಾಗ)
1. ಕ್ರಿಸ್ಟಿಯಾನೋ ರೊನಾಲ್ಡೋ: ಪೋರ್ಚುಗಲ್: 146 ಗೋಲುಗಳು.
2. ಲಿಯೋನೆಲ್ ಮೆಸ್ಸಿ: ಅರ್ಜೆಂಟೀನಾ: 125 ಗೋಲುಗಳು.
3. ಅಲಿ ದಾಯಿ: ಇರಾನ್: 108 ಗೋಲುಗಳು.
4. ಸುನಿಲ್ ಛೇತ್ರಿ: ಭಾರತ: 95 ಗೋಲುಗಳು.
5. ರೊಮೆಲು ಲುಕಾಕು: ಬೆಲ್ಜಿಯಂ: 93 ಗೋಲುಗಳು.
ಮಂಗಳವಾರ, 01 ಸೆಪ್ಟೆಂಬರ್ 2026
10:30 ಪೂರ್ವಾಹ್ನ
Daily PDF
ಲಿಯೋನೆಲ್ ಮೆಸ್ಸಿ ಅಂತರರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ
Authored by:
Yallamma G