➤ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನ 137ನೇ ಆವೃತ್ತಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ಆವೃತ್ತಿಯಲ್ಲಿ ಯುವಜನತೆಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸುವುದು, ಮಹಿಳಾ ಸಬಲೀಕರಣ, ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ (Vocal for Local) ಹಾಗೂ ನಾವೀನ್ಯತಾ ಬಾಹ್ಯಾಕಾಶ ಯೋಜನೆಗಳ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದರು.
➤ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಾದಕ ದ್ರವ್ಯ ಮುಕ್ತ ಯುವಜನತೆ’ (Nasha Mukt Yuva for Viksit Bharat)
- ಕರೆಯ ಉದ್ದೇಶ: ದೇಶದ ಯುವಜನತೆಯನ್ನು ಮಾದಕ ದ್ರವ್ಯಗಳ ದುಷ್ಪರಿಣಾಮದಿಂದ ರಕ್ಷಿಸಲು ಪ್ರಧಾನಿ ಮೋದಿ ಜನ ಚಳುವಳಿಗೆ ಕರೆ ನೀಡಿದರು.
- ಸೃಜನಶೀಲತೆಗೆ ಮನವಿ: ಸಂಗೀತಗಾರರು, ನಾಟಕ ಕಲಾವಿದರು, ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಶಿಕ್ಷಕರು ಮುಂದೆ ಬಂದು ಹಾಡುಗಳು, ಬೀದಿ ನಾಟಕಗಳು ಹಾಗೂ ಆಕರ್ಷಕ ಘೋಷಣೆಗಳ ಮೂಲಕ ಜಾಗೃತಿ ಮೂಡಿಸಲು ವಿನಂತಿಸಿದರು.
- ಮಾದಕ ದ್ರವ್ಯ ಮುಕ್ತ ಭಾರತ ಅಭಿಯಾನ (NMBA): ಈ ಅಭಿಯಾನವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ (Ministry of Social Justice and Empowerment) ಅನುಷ್ಠಾನಗೊಳಿಸುತ್ತಿದ್ದು, MYBharat Portal ಮೂಲಕ ಯುವಕರು ನೇರವಾಗಿ ನೋಂದಾಯಿಸಿಕೊಂಡು 'ಪ್ರತಿಜ್ಞೆ' (Pledge) ಸ್ವೀಕರಿಸಬಹುದು.
➤ ಮಹಿಳಾ ಸಬಲೀಕರಣ ಮತ್ತು ಪಿಎಂ ಸ್ವನಿಧಿ (PM SVANidhi) ಯೋಜನೆ:
- ಸಾಧನೆ: 'ಪಿಎಂ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ' (PM SVANidhi) ಯೋಜನೆಯಲ್ಲಿ ಶೇ. 46ರಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದಾರೆ.
- ದೇಶದಾದ್ಯಂತ ಸುಮಾರು 35 ಲಕ್ಷಕ್ಕೂ ಅಧಿಕ ಮಹಿಳೆಯರು/ತಾಯಂದಿರು ಈ ಯೋಜನೆಯ ಲಾಭ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ.
- ವಿಸ್ತರಣೆ: ಕೋವಿಡ್ ಸಮಯದಲ್ಲಿ ಪ್ರಾರಂಭವಾದ ಈ ಯೋಜನೆಯನ್ನು 2030ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.
➤ ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ನಾವೀನ್ಯತೆಗಳು:
- ಮಿಷನ್ ಶಕ್ತಿಸ್ಯಾಟ್ (Mission ShaktiSAT): ವಿಶ್ವದ 108 ದೇಶಗಳ 12,000 ಹೆಣ್ಣುಮಕ್ಕಳನ್ನು ಒಟ್ಟುಗೂಡಿಸಿ ಉಪಗ್ರಹ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ತರಬೇತಿ ನೀಡುವ ಭಾರತದ ಐತಿಹಾಸಿಕ ಉಪಕ್ರಮವನ್ನು ಪ್ರಧಾನಿ ಶ್ಲಾಘಿಸಿದರು.
- ವೈಕಾಲು ಪುರೋಜಜಿ (Vaishalu Puroji): ನಾಗಾಲ್ಯಾಂಡ್‌ನ ಫೆಕ್ (Phek) ಜಿಲ್ಲೆಯ ವೈಕಾಲು ಪುರೋಜಜಿ ಅವರು ಕೃಷಿ ವಿಜ್ಞಾನ ಕೇಂದ್ರದ ನೆರವಿನಿಂದ ಹೂವುಗಳ (Gladiolus) ವೈಜ್ಞಾನಿಕ ಬೇಸಾಯ ಮಾಡಿ ಸಾಧಿಸಿದ ಯಶೋಗಾಥೆಯನ್ನು ಉಲ್ಲೇಖಿಸಲಾಯಿತು.
- ‘ಭಾರತ್ ರಾಜ್ಯ’ (BharatRajya) ಪೋರ್ಟಲ್: ಮುಂಬೈನ ಕೃಷ್ಣ ಶೇಷಾದ್ರಿ ಅವರು ಜನರೇಟಿವ್ AI (Generative AI) ಬಳಸಿ ನಿರ್ಮಿಸಿದ bharatrajya.com ವೆಬ್‌ಸೈಟ್ ಅನ್ನು ಪ್ರಧಾನಿ ಶ್ಲಾಘಿಸಿದರು. ಈ ಪೋರ್ಟಲ್‌ನಲ್ಲಿ ನಿರ್ದಿಷ್ಟ ವರ್ಷವನ್ನು ಆಯ್ಕೆ ಮಾಡುವ ಮೂಲಕ ಆಯಾ ಕಾಲಘಟ್ಟದಲ್ಲಿ ಭಾರತದ ಯಾವ ಪ್ರದೇಶವನ್ನು ಯಾರು ಆಳುತ್ತಿದ್ದರು ಎಂಬುದನ್ನು ಸುಲಭವಾಗಿ ತಿಳಿಯಬಹುದು.
➤ ಸ್ವಾತಂತ್ರ್ಯದ ಸ್ಮರಣೆ & 'ವೋಕಲ್ ಫಾರ್ ಲೋಕಲ್' (Vocal for Local):
- ವಂದೇ ಮಾತರಂ 150 ವರ್ಷ: ರಾಷ್ಟ್ರಗೀತೆ 'ವಂದೇ ಮಾತರಂ' ರಚನೆಯಾಗಿ 150 ವರ್ಷಗಳು ಪೂರ್ಣಗೊಳ್ಳುತ್ತಿರುವುದನ್ನು ಸ್ಮರಿಸಿದರು.
- ಹರ್ ಫರ್ ತಿರಂಗಾ: ದೇಶಪ್ರೇಮದ ಸಂಕೇತವಾಗಿ ದೇಶದೆಲ್ಲಡೆ 'ಹರ್ ಘರ್ ತಿರಂಗಾ' ಕಾರ್ಯಕ್ರಮವನ್ನು ಕೊಂಡಾಡಲಾಯಿತು.
- ಸ್ವದೇಶಿ ಉತ್ಪನ್ನಗಳ ಬಳಕೆ: ಮುಂಬರುವ ಹಬ್ಬಗಳ ಸಾಲಿನಲ್ಲಿ ಪ್ರತಿಯೊಬ್ಬರೂ ಭಾರತದಲ್ಲೇ ತಯಾರಾದ ಸ್ಥಳೀಯ ಉತ್ಪನ್ನಗಳನ್ನು (Made in India Products) ಖರೀದಿಸುವ ಮೂಲಕ ದೇಶೀಯ ಕುಶಲಕರ್ಮಿಗಳಿಗೆ ಬೆಂಬಲ ನೀಡಬೇಕೆಂದು ಕರೆ ನೀಡಿದರು.
ಮಂಗಳವಾರ, 01 ಸೆಪ್ಟೆಂಬರ್ 2026
10:30 ಪೂರ್ವಾಹ್ನ
Daily PDF
137ನೇ ಮನ್ ಕೀ ಬಾತ್: 'ಮಾದಕ ದ್ರವ್ಯ ಮುಕ್ತ ಭಾರತ'ಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ
Authored by:
Akshata Halli