* ತುಳು ಭಾಷೆಯು ಬೇರೆ ಉಳಿದ ಎಲ್ಲ ಭಾಷೆಗಳಷ್ಟೇ ಪ್ರಾಚೀನವಾದ ಭಾಷಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬೆಳವಣಿಗೆ ಹೊಂದಿರುವ ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಘೋಷಿಸಲು ಅರ್ಹವಾಗಿದೆ ಎಂದು ಡಾ.ಎಂ. ಮೋಹನ್ ಆಳ್ವ ಸಮಿತಿ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
* ದ್ರಾವಿಡ ಭಾಷಾ ವರ್ಗದ ಪ್ರಾಚೀನ ಸ್ವತಂತ್ರವೂ ಆದ ತುಳು ಭಾಷೆಗೆ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ದೊರೆತರೆ, ಯುನೆಸ್ಕೋ ವರದಿಯಲ್ಲಿ ನಶಿಸಿ ಹೋಗುತ್ತಿರುವ ಭಾಷಾ ಪಟ್ಟಿಯಲ್ಲಿರುವ ಈ ಭಾಷೆ ಉಳಿಸಿ, ಬೆಳೆಸಿದ ಮತ್ತು ತುಳುವರಿಗೆ ನೈತಿಕ ಧೈರ್ಯ ತುಂಬಿದ ಶ್ರೇಯ ಸರಕಾರದ್ದಾಗುತ್ತದೆ.
* ತುಳುವಿಗೆ ಸಂಬಂಧಿಸಿದಂತೆ ಅಕ್ಷರಾಭ್ಯಾಸ ಇಲ್ಲದ ತುಳುವರಿಗೆ ಮತ್ತು ದೇಶ, ವಿದೇಶಗಳಿಂದ ಬರುವ ತುಳುವರಿಗೆ ಬ್ಯಾಂಕಿಂಗ್ ವ್ಯವಹಾರ, ನ್ಯಾಯಾಂಗ ವ್ಯವಸ್ಥೆ, ವಿವಿಧ ಇಲಾಖೆ ಗಳೊಂದಿಗೆ ಸಂವಹನ ಸುಲಭವಾಗುತ್ತದೆ. ಹಾಗೂ ಇದರಿಂದ ಆಡಳಿತ, ವ್ಯವಹಾರಗಳು ಸಹ ಹೆಚ್ಚು ಜನಸ್ನೇಹಿಯಾಗುತ್ತದೆ’ಎಂಬುವುದಾಗಿ ವರದಿಯಲ್ಲಿ ಪ್ರತಿಪಾದಿಸಲಾಗಿದೆ.
ಗುರುವಾರ, 27 ಜುಲೈ 2023
2:05 ಅಪರಾಹ್ನ
Daily PDF
ಕರ್ನಾಟಕದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ
Authored by:
Akshata Halli