* ಭಾರತ ಮತ್ತು ಮಂಗೋಲಿಯಾ ಸೇನಾ ಪಡೆಗಳು ಉಲನ್‌ಬಾತಾರ್‌ನಲ್ಲಿ ಇದೇ 17 ರಿಂದ 31ರವರೆಗೆ 15ನೇ ಆವೃತ್ತಿಯ ದ್ವಿಪಕ್ಷೀಯ ಮಿಲಿಟರಿ ತಾಲೀಮು ನಡೆಸಲಿದೆ ಎಂದು ಭದ್ರತಾ ಸಚಿವಾಲಯ ತಿಳಿಸಿದೆ.
* ಈ ಬಾರಿಯ ಸಮರಾಭ್ಯಾಸಕ್ಕೆ 'ನೋಮ್ಯಾಡಿಕ್ ಎಲಿಫೆಂಟ್ -23'(Nomadic Elephant -23)ಎಂದು ನಾಮಕರಣ ಮಾಡಲಾಗಿದೆ.
* ಸಕಾರಾತ್ಮಕ ಮಿಲಿಟರಿ ಸಂಬಂಧಗಳನ್ನು ನಿರ್ಮಿಸುವುದು, ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುವುದು, ಪರಸ್ಪರ ಕಾರ್ಯಸಾಧ್ಯತೆ, ಬೋನ್‌ಹೋಮಿ, ಸೌಹಾರ್ದತೆ ಮತ್ತು ಎರಡು ಸೇನೆಗಳ ನಡುವೆ ಸ್ನೇಹವನ್ನು ಅಭಿವೃದ್ಧಿಪಡಿಸುವುದು ಈ ಸಮರಾಭ್ಯಾಸದ ಉದ್ದೇಶವಾಗಿದೆ.
* ನೋಮ್ಯಾಡಿಕ್ ಎಲಿಫೆಂಟ್ ಸಮರಾಭ್ಯಾಸ ಮಂಗೋಲಿಯ ಮತ್ತು ಭಾರತ ದೇಶಗಳ ನಡುವೆ ವಾರ್ಷಿಕವಾಗಿ ನಡೆಯುವ ಸಮರಾಭ್ಯಾಸವಾಗಿದೆ. ಕಳೆದ 2019ರ ಅಕ್ಟೋಬರ್‌ನಲ್ಲಿ ಹಿಮಾಚಲ ಪ್ರದೇಶದ ಬಾಕೋಲ್ಹ್ ವಿಶೇಷ ಪಡೆಗಳ ತರಬೇತಿ ಶಾಲೆಯಲ್ಲಿ ಇದನ್ನು ಆಯೋಜಿಸಲಾಗಿತ್ತು.
ಜುಲೈ 17 ರಿಂದ 31ರವರೆಗೆ ಮಿಲಿಟರಿ ತಾಲೀಮು ನಡೆಸಲಿರುವ ಭಾರತ- ಮಂಗೋಲಿಯಾ
Published by Yallamma G
18 ಜುಲೈ 2023