* ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ನಿತ್ಯ ಪೂಜೆ ಸಲ್ಲಿಸಲು ಹಿಂದೂಗಳಿಗೆ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ. ಈ ನಿರ್ಧಾರದಿಂದಾಗಿ ಈಗ ಪ್ರತಿಯೊಬ್ಬ ಹಿಂದುವೂ ಈ ನೆಲಮಹಡಿಗೆ ಹೋಗಿ ದರ್ಶನ ಮತ್ತು ಪೂಜೆಯನ್ನು ಮಾಡಬಹುದಾಗಿದೆ.
* ಮಸೀದಿಯ ನೆಲಮಹಡಿಯಲ್ಲಿ ನಿತ್ಯ ಪೂಜೆ ಸಲ್ಲಿಸಲು ಅರ್ಚಕರಿಗೆ ಕೋರ್ಟ್ ಅವಕಾಶ ನೀಡಿದ್ದು, ಪೂಜೆಗೆ ಅಗತ್ಯ ವ್ಯವಸ್ಥೆಯನ್ನು ನೀಡಬೇಕೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಆದೇಶಿಸಿದೆ.
* 1993ರ ಮೊದಲು ಇಲ್ಲಿ ನಿತ್ಯ ಪೂಜೆ ನಡೆಯುತ್ತಿತ್ತು; ಆದರೆ ಆಗಿನ ಸರಕಾರ ಇದನ್ನು ನಿಷೇಧಿಸಿತ್ತು. ಈಗ ಪೂಜೆಗೆ ಅನುಮತಿ ನೀಡಬೇಕೆಂದು ಹಿಂದೂ ಪಕ್ಷ ಆಗ್ರಹಿಸಿತ್ತು. ಮುಂದಿನ 7 ದಿನಗಳಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ವ್ಯವಸ್ಥೆ ಮಾಡುವಂತೆ ವಾರಣಾಸಿಯ ಜಿಲ್ಲಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ.
* ನ್ಯಾಯಾಲಯದ ಆದೇಶದ ನಂತರ ಪ್ರಸ್ತುತ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ನಂದಿಯ ಮುಂಭಾಗದಿಂದ ಜ್ಞಾನವಾಪಿ ವ್ಯಾಸ ನೆಲಮಾಳಿಗೆಗೆ ಹೋಗುವ ರಸ್ತೆಯನ್ನು ನಿರ್ಮಿಸಲಾಗುವುದು. ಸದ್ಯ ಇಲ್ಲಿ ಕಬ್ಬಿಣದ ಬೇಲಿ ಅಳವಡಿಸಲಾಗಿದೆ.
* ‘ಕಾಶಿ ವಿಶ್ವನಾಥ ಟ್ರಸ್ಟ್’ ಅಡಿಯಲ್ಲಿ ನೆಲಮಾಳಿಗೆಯಲ್ಲಿ ಪೂಜೆ ನಡೆಯಲಿದೆ.
* ಈ ಸಂಬಂಧ ಆಚಾರ್ಯ ವೇದವ್ಯಾಸ ಪೀಠದ ಪ್ರಧಾನ ಅರ್ಚಕ ಶೈಲೇಂದ್ರ ಕುಮಾರ್ ಪಾಠಕ್ ಪ್ರಕರಣ ದಾಖಲಿಸಿದ್ದರು. ನಂತರ ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿಯ ದಕ್ಷಿಣ ನೆಲಮಾಳಿಗೆಯ ನಿಯಂತ್ರಣವನ್ನು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಹಸ್ತಾಂತರಿಸಿತ್ತು.
ಜ್ಞಾನವಾಪಿಯಲ್ಲಿ ಮತ್ತೆ ಹಿಂದೂಗಳಿಗೆ ಪೂಜೆಗೆ ಅವಕಾಶ
Published by Yallamma G
03 ಫೆಬ್ರವರಿ 2024