* ನೂತನ ಸರ್ವೇಕ್ಷಣಾ ನೌಕೆ 'ಸಂಧಾಯಕ್' ಕಾರ್ಯಾಚರಣೆಗೆ ಶೀಘ್ರದಲ್ಲೇ ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆಯು ಚಾಲನೆ ನೀಡಲಿದೆ ಎಂದು ನೌಕಾಪಡೆ ಮುಖ್ಯಸ್ಥ ಹರಿ ಸಿಂಗ್ ಅವರು ತಿಳಿಸಿದ್ದಾರೆ.
* ಕೋಲ್ಕತ್ತಾದ ಎಂ/ ಎಸ್ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಆಂಡ್ ಎಂಜಿನಿಯರ್ಸ್ (ಜಿಆರ್‌ಎಸ್‌ಇ) ಅವರು ನೌಕಾಪಡೆಗಾಗಿ ನಾಲ್ಕು ಸರ್ವೇಕ್ಷಣಾ ನೌಕೆಗಳನ್ನು ನಿರ್ಮಿಸುತ್ತಿದ್ದಾರೆ.
* ಇದನ್ನು ಡಿಸೆಂಬರ್ 4ರಂದು ಸಂಸ್ಥೆಯು ನೌಕಾಪಡೆಗೆ ಹಸ್ತಾಂತರಿಸಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಧಾಯಕ್ ನೌಕೆ ವೈಶಿಷ್ಟ್ಯ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.
* ಸಂಧಾಯಕ್ ನೌಕೆ ಭಾರತದ ಅತಿದೊಡ್ಡ ಸರ್ವೇಕ್ಷಣಾ ನೌಕೆ. 3,300 ಟನ್ ತೂಕ, 110 3 (360 8 11 203) ಉದ್ದವಿದೆ. ಗಂಟೆಗೆ 26ರಿಂದ 30 ಕಿ.ಮೀ ವೇಗದಲ್ಲಿ ಚಲಿಸಲಿವೆ. ಈ ಹಡಗುಗಳು ಅಂತಾರಾಷ್ಟ್ರೀಯ ಸಮುದ್ರಯಾನ ಸಂಸ್ಥೆ ನಿಗದಿಪಡಿಸಿರುವ ನೌಕಾ ಹಡಗು ನಿಯಮಾವಳಿಗಳ ಪ್ರಕಾರ ನಿರ್ಮಿಸಲ್ಪಟ್ಟಿವೆ.
* ಐಎನ್‌ಎಸ್ ಸಂಧಾಯಕ್ ಸುದ್ದಿ ಹಡಗನ್ನು 1981ರಲ್ಲಿಯೇ ನೌಕಾಪಡೆಗೆ ಸೇರ್ಪಡೆ ಮಾಡಲಾಗಿತ್ತು. ಅದು ಕೂಡ ಸಮೀಕ್ಷಾ ನೌಕೆಯಾಗಿತ್ತು. ಆದರೆ, ಕಾರಣಾಂತರಗಳಿಂದ 2021ರಲ್ಲಿ ಈ ಹಡಗನ್ನು ನಿಷ್ಕ್ರಿಯಗೊಳಿಸಲಾಗಿತ್ತು.
ಶನಿವಾರ, 03 ಫೆಬ್ರುವರಿ 2024
11:09 ಪೂರ್ವಾಹ್ನ
Daily PDF
ನೂತನ ಸರ್ವೇಕ್ಷಣಾ ನೌಕೆ "ಸಂಧಾಯಕ್" ನೌಕೆಗೆ ಶೀಘ್ರದಲ್ಲೇ ಚಾಲನೆ
Authored by:
Akshata Halli