* ಭಾರತದ G20 ಪ್ರೆಸಿಡೆನ್ಸಿಯಡಿಯಲ್ಲಿ ಮೂರನೇ ಫ್ರೇಮ್‌ವರ್ಕ್ ವರ್ಕಿಂಗ್ ಗ್ರೂಪ್ ಸಭೆಯು ಜೂನ್ 13 ರಂದು ಕೇರಳದ ಕೊಚ್ಚಿಯಲ್ಲಿ ಚಾಲನೆ ಪಡೆದಿದ್ದು, 2 ದಿನಗಳ ಈವೆಂಟ್‌ನಲ್ಲಿ G20 ಸದಸ್ಯ ರಾಷ್ಟ್ರಗಳು, ಆಹ್ವಾನಿತ ದೇಶಗಳು, ವಿವಿಧ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳಿಂದ 75ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
* ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ ಅನಂತನಾಗೇಶ್ವರನ್, ಯುಕೆ ಖಜಾನೆ ಉಪನಿರ್ದೇಶಕ ಟಾಮ್ ಹೆಮಿಂಗ್ವೇ ಜಂಟಿಯಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ.
* ಸದಸ್ಯ ರಾಷ್ಟ್ರಗಳ ನೀತಿ ಅನುಭವಗಳ ಹಂಚಿಕೆಯ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುವುದು, ಜಾಗತಿಕ ಸಹಕಾರವು ದೇಶಗಳ ದೇಶೀಯ ಪ್ರಯತ್ನಗಳನ್ನು ಬೆಂಬಲಿಸಲು ಸಹಾಯ ಮಾಡುವ ಕ್ಷೇತ್ರಗಳನ್ನು ಅನ್ವೇಷಿಸಲು ಸಭೆಯ ಗುರಿಯಾಗಿದೆ.
ಜಿ20 ಭಾರತ ಅಧ್ಯಕ್ಷತೆಯಲ್ಲಿ 3ನೇ ಫ್ರೇಮ್‌ವರ್ಕ್ ವರ್ಕಿಂಗ್ ಗ್ರೂಪ್ ಸಭೆ ಕೊಚ್ಚಿಯಲ್ಲಿ ಆರಂಭ
Published by Yallamma G
14 ಜೂನ್ 2023