* ಚಂದ್ರಯಾನ 3 ಯಶಸ್ಸಿನ ರೂವಾರಿ, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರ ಆತ್ಮಚರಿತ್ರೆ ‘ನಿಲವು ಕುಡಿಚ ಸಿಂಹಂಗಲ್’ ಮಲಯಾಳಂ ಭಾಷೆಯಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿದೆ.
* ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರ ಆತ್ಮಚರಿತ್ರೆ ಮಲಯಾಳಂನಲ್ಲಿ ರಿಲೀಸ್ ಆಗಲಿದೆ. ‘ನಿಲವು ಕುಡಿಚ ಸಿಂಹಂಗಲ್’ ಎಂಬ ಶೀರ್ಷಿಕೆ ಇಡಲಾಗಿದೆ. ಕೇರಳ ಮೂಲದ ಲಿಪಿ ಪಬ್ಲಿಕೇಷನ್ಸ್‍ನಿಂದ ಪ್ರಕಟವಾಗುತ್ತಿರುವ ಈ ಪುಸ್ತಕವು ನವೆಂಬರ್ ನಲ್ಲಿ ಲೋಕಾರ್ಪಣೆಗೊಳ್ಳಲಿದೆ.
* ಸೋಮನಾಥ ಅವರು ಕಾಲೇಜು ದಿನಗಳಲ್ಲಿ ಅನುಭವಿಸಿದ ಕಷ್ಟದ ದಿನಗಳನ್ನು ಪುಸ್ತಕದಲ್ಲಿ ಮೆಲುಕು ಹಾಕಲಾಗಿದ್ದು ಯುವ ವಿಜ್ಞಾನಿಗಳಿಗೆ ಪ್ರೇರಣೆ ಯಾಗಲಿದೆ ಎಂದು ಭಾವಿಸಲಾಗಿದೆ.
* ಪುಸ್ತಕವು ನನ್ನ ಜೀವನದ ಕಥೆಯನ್ನು ಕಲಿಸುವ ಉದ್ದೇಶವನ್ನು ಹೊಂದಿಲ್ಲ. ಜೀವನದಲ್ಲಿ ಪ್ರತಿಕೂಲತೆಯನ್ನು ಎದುರಿಸುವಾಗ ಜನರು ತಮ್ಮ ಕನಸುಗಳನ್ನು ಬೆನ್ನಟ್ಟಲು ಪ್ರೇರೇಪಿಸುವುದು ಇದರ ಏಕೈಕ ಉದ್ದೇಶವಾಗಿದೆ" ಎಂದು ಸೋಮನಾಥ್ ಹೇಳಿದ್ದಾರೆ.
ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ಅವರ ಆತ್ಮಚರಿತ್ರೆ ಶೀಘ್ರದಲ್ಲೇ ಬಿಡುಗಡೆ
Published by Yallamma G
27 ಅಕ್ಟೋಬರ್ 2023