* 2024 ನೇ ಸಾಲಿನ ಜಾಗತಿಕ 200 ಅತ್ಯುತ್ತಮ ವಿಶ್ವ ವಿದ್ಯಾಲಯಗಳ ರ‍್ಯಾಂಕಿಂಗ್ ಪಟ್ಟಿ 2023 ಅಕ್ಟೋಬರ್ 26 ರಂದು ಬಿಡುಗಡೆಗೊಂಡಿದ್ದು, ರ‍್ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐ ಐಎಸ್ ಸಿ) ನಾಲ್ಕು ವಿಷಯದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.
* ಈ ಸಂಸ್ಥೆಯಲ್ಲಿ ಇರುವ 4 ವಿಷಯಗಳಾದ ಭೌತಿಕ ವಿಜ್ಞಾನ, ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಜೀವ ವಿಜ್ಞಾನದಲ್ಲಿ ಬೆಂಗಳೂರು ವಿಜ್ಞಾನ ಸಂಸ್ಥೆ ಭಾರತೀಯ ವಿಶ್ವ ವಿದ್ಯಾಲಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
* ವಿಷಯವಾರು ಜಾಗತಿಕ ವಿವಿಗಳ ಪಟ್ಟಿಯಲ್ಲಿ ಬೆಂಗಳೂರಿನ ಐ ಐಎಸ್ ಸಿ ಗೆ ಎಂಜಿನಿಯರಿಂಗ್ ವಿಭಾಗ 101 ರಿಂದ 125 ನೇ ಸ್ಥಾನ ಪಡೆದಿದ್ದು, ಭಾರತೀಯ ವಿವಿಗಳ ಪಟ್ಟಿಗೆ ಮೊದಲ ಸ್ಥಾನ ಪಡೆದುಕೊಂಡಿದೆ.
* ಶ್ರೇಯಾಂಕದಲ್ಲಿರುವ ಅಗ್ರ 10 ವಿಶ್ವ ವಿದ್ಯಾಲಯ ಸಂಸ್ಥೆಗಳು:
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಯುಕೆ
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, US
ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, US
ಹಾರ್ವರ್ಡ್ ವಿಶ್ವವಿದ್ಯಾಲಯ, US
ಕೇಂಬ್ರಿಡ್ಜ್ ವಿಶ್ವವಿದ್ಯಾಲಯ , ಯುಕೆ
ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ, US
ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, US
ಇಂಪೀರಿಯಲ್ ಕಾಲೇಜ್ ಲಂಡನ್, ಯುಕೆ
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ, US
ಯೇಲ್ ವಿಶ್ವವಿದ್ಯಾಲಯ, US
ಶುಕ್ರವಾರ, 27 ಅಕ್ಟೋಬರ್ 2023
11:20 ಪೂರ್ವಾಹ್ನ
Daily PDF
ಬೆಂಗಳೂರು ಐ ಐಎಸ್ ಸಿ ಗೆ ಅಗ್ರ ಸ್ಥಾನ
Authored by:
Bhagya R K