* ಭಾರತ ಮಹಿಳಾ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಆಗಿ ಮುಂಬೈ ತಂಡದ ಮಾಜಿ ನಾಯಕ ಮತ್ತು ದೇಶೀಯ ಕ್ರಿಕೆಟ್​ನ ಮಾಜಿ ಆಟಗಾರ ಅಮೋಲ್ ಮಜುಂದಾರ್ ಅವರನ್ನು 2023 ಅಕ್ಟೋಬರ್ 25 ರಂದು ನೇಮಕ ಮಾಡಲಾಗಿದೆ. 
*  ಸುಲಕ್ಷಣಾ ನಾಯಕ್, ಅಶೋಕ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರಿದ್ದ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಅಭ್ಯರ್ಥಿಗಳ ಸಂದರ್ಶನ ನಡೆಸಿತ್ತು. ಮೂವರು ಸದಸ್ಯರ ಸಮಿತಿಯು ಮಜುಂದಾರ್ ಅವರನ್ನು ಹುದ್ದೆ ವಹಿಸಿಕೊಳ್ಳುವಂತೆ ಸರ್ವಾನುಮತದಿಂದ ಶಿಫಾರಸು ಮಾಡಿದೆ.
* ಅಮೋಲ್ ಮಜುಂದಾರ್ ಅವರು 48 ವರ್ಷ ವಯಸ್ಸಿನಲ್ಲಿ 21 ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್​ ಆಡಿದ ಅನುಭವ ಹೊಂದಿದ್ದು, ಪ್ರಥಮ ದರ್ಜೆ ಕ್ರಿಕೆಟ್​ ವೃತ್ತಿಜೀವನದಲ್ಲಿ 171 ಪಂದ್ಯಗಳನ್ನು ಆಡಿ 30 ಶತಕ ಬಾರಿಸಿದ ಸಾಧನೆ ಅವರದ್ದಾಗಿದೆ. ಒಟ್ಟಾರೆ 11167 ರನ್​ ಬಾರಿಸಿದ್ದಾರೆ. 113 ಲಿಸ್ಟ್ ಎ ಪಂದ್ಯಗಳನ್ನು ಆಡಿ 3286 ರನ್​ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಒಳಗೊಂಡಿದೆ.