* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ಅಧ್ಯಯನಕ್ಕಾಗಿ ಉಡಾಯಿಸಲಾಗಿರುವ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯ ಪಥ ಸರಿಪಡಿಸುವಿಕೆ ಕಾರ್ಯಾಚರಣೆಯನ್ನು (ಟಿಸಿಎಂ) ಅಕ್ಟೋಬರ್ 6 ರಂದು ಯಶಸ್ವಿಯಾಗಿ ನಡೆಸಿರುವುದಾಗಿ ಅಕ್ಟೋಬರ್ 8 ರಂದು ತಿಳಿಸಿದೆ.
* ಇಸ್ರೋ ಸಿದ್ಧಪಡಿಸಿರುವ ನೌಕೆಯು ಆರೋಗ್ಯಕರವಾಗಿದ್ದು ಸೂರ್ಯ-ಭೂಮಿಯ ಎಲ್1 ಪಾಯಿಂಟ್‌ನತ್ತ ಪಯಣಿಸುತ್ತಿದೆ ಎಂದು ಎಕ್ಸ್‌ನ ಒಂದು ಪೋಸ್ಟ್‌ನಲ್ಲಿ ಇಸ್ರೋ ವಿವರಿಸಿದೆ.
* 9.2 ಲಕ್ಷ ಕಿಮೀ ಪಯಣ: ಮೈಮನೌಕೆ ಭೂಮಿಯಿಂದ 9.2 ಲಕ್ಷ ಕಿಮೀ ದೂರ ಪಯಣಿಸಿದೆ ಎಂದು ಇಸ್ರೋ ದಿಂದ ಸೆಪ್ಟೆಂಬರ್ 30ರಂದು ತಿಳಿದು ಬಂದಿತ್ತು.
ಸೋಮವಾರ, 09 ಅಕ್ಟೋಬರ್ 2023
7:58 ಅಪರಾಹ್ನ
Daily PDF
ಇಸ್ರೋ : ಆದಿತ್ಯ-ಎಲ್1 ಪಥ ಬದಲು
Authored by:
Bhagya R K